ಹಾವೇರಿ: ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಫ್ಲೆಕ್ಸ್ ಹರಿದು ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಹೇಳಿಕೆಗೆ ಹಾವೇರಿಯಲ್ಲಿ ಸಿಎಂ ತಿರುಗೇಟು ನೀಡಿದ್ದಾರೆ. ಡಿಕೆಶಿ ಹೇಳಲಿ ಬಿಡಲಿ, ಮೊದಲನೆಯದಾಗಿ ಪರ್ಮಿಷನ್ ತಗೊಂಡು ಫ್ಲೆಕ್ಸ್ ಹಾಕಬೇಕು. ಪರ್ಮಿಷನ್ ತಗೊಂಡಿದ್ರಾ.? ಇಲ್ಲವಾ ನನಗೆ ಮಾಹಿತಿ ಇಲ್ಲ. ಯಾವ ಪಕ್ಷಕ್ಕೂ ಫ್ಲೆಕ್ಸ್ ಹರಿಯುವಂತ ಅವಶ್ಯಕತೆ ಇಲ್ಲ ಎಂದರು.
ಪಿ ಎಫ್ ಐ ಬ್ಯಾನ್ ಪೊಲಿಟಿಕಲ್ ಗಿಮಿಕ್ ಎಂಬ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಸಿಎಂ ಅವನ ಕಡೆಯಿಂದ ಏನೂ ಎಕ್ಸ್ಪೆಕ್ಟ್ ಮಾಡೋಕೆ ಆಗಲ್ಲ. ಹಿಂದೆ ಪಿ.ಎಫ್ ಐ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿದಾಗ ಇದೇ ಕಾಂಗ್ರೆಸ್ ನವರು ಬ್ಯಾನ್ ಮಾಡಿ, ಬ್ಯಾನ್ ಮಾಡಿ ಅಂತ ಅಸೆಂಬ್ಲಿಯಲ್ಲಿ ಕೂಗಾಡಿದ್ರು. ಈಗ ಪಿ.ಎಫ್.ಐ ಬ್ಯಾನ್ ಮಾಡಿದ ಮೇಲೆ ಎಲೆಕ್ಷನ್ ಗಿಮಿಕ್ ಅನ್ನೋದು ಎಷ್ಟು ಸರಿ.? ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.