ಇಂದಿನಿಂದ ಪ್ರಧಾನಿ ಮೋದಿ 2 ದಿನಗಳ ಗುಜರಾತ್ ಭೇಟಿ: 29,000 ಕೋಟಿ ರೂ.ಯೋಜನೆಗಳಿಗೆ ಚಾಲನೆ

ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 2 ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿದ್ದು ಸೂರತ್, ಭಾವನಗರ, ಅಹಮದಾಬಾದ್ ಮತ್ತು ಅಂಬಾಜಿಯಲ್ಲಿ ಸುಮಾರು 29,000 ಕೋಟಿ ರೂ.ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಈ ಎಲ್ಲಾ ಯೋಜನೆಗಳು ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿವೆ.

ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಸೂರತ್‌ನಲ್ಲಿ 3,400 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಭಾವನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಮಧ್ಯಾಹ್ನ 2 ಗಂಟೆಗೆ ಅವರು 5,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ.

ಬಳಿಕ ಸೆ. 30 ರಂದು, ಪ್ರಧಾನಿಯವರು ಅಹಮದಾಬಾದ್ ಮೆಟ್ರೋ ಯೋಜನೆಯ ಹಂತ-1 ಅನ್ನು ಉದ್ಘಾಟಿಸಲಿದ್ದಾರೆ. ಗಾಂಧಿನಗರ-ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ರಾಜ್ಯಕ್ಕೆ ತನ್ನ ಎರಡು ದಿನಗಳ ಭೇಟಿಯ ಸಮಯದಲ್ಲಿ ಅವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಅಹಮದಾಬಾದ್ ಮೆಟ್ರೋದಲ್ಲಿ ಸವಾರಿ ಮಾಡುವ ನಿರೀಕ್ಷೆಯಿದೆ. ಅದೇ ದಿನ, ಪ್ರಧಾನಿ ಮೋದಿ ಅವರು ಅಂಬಾಜಿಯಲ್ಲಿ 7,200 ಕೋಟಿ ರೂ.ಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. ಸಂಜೆ 7 ಗಂಟೆಗೆ ಅಂಬಾಜಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ನಂತರ, ಸುಮಾರು 7:45 PM, ಅವರು ಗಬ್ಬರ್ ತೀರ್ಥದಲ್ಲಿ ಮಹಾ ಆರತಿಯಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರಧಾನಿಯವರು ತಮ್ಮ ಭೇಟಿಯ ವೇಳೆ ಭಾವನಗರದಲ್ಲಿ 5,200 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್‌ನ ಶಂಕುಸ್ಥಾಪನೆ ಮತ್ತು ಭಾವನಗರದಲ್ಲಿ ಬ್ರೌನ್‌ಫೀಲ್ಡ್ ಬಂದರಿಗೆ 4,000 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು, ಅತ್ಯಾಧುನಿಕ ಮೂಲಸೌಕರ್ಯವನ್ನು ಹೊಂದಿರುತ್ತದೆ.