ಕಾಣೆಯಾದ ಮಹಿಳೆ ಶವವಾಗಿ ಪತ್ತೆ.!

ಯಲ್ಲಾಪುರ: ಪಟ್ಟಣದ ಕಾಳಮ್ಮಾನಗರದ ಕೆರೆಯಲ್ಲಿ ಗುರುವಾರ ಮಹಿಳೆಯೋರ್ವಳ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಉದ್ಯಮನಗರದ ರಾಜೇಶ್ವರಿ ಪಾಂಡುರಂಗ ವರ್ಣೇಕರ್ (55) ಎಂದು ಗುರುತಿಸಲಾಗಿದೆ.

ಜುಲೈ 10ರ ರಾತ್ರಿಯಿಂದ ರಾಜೇಶ್ವರಿ ಕಾಣೆಯಾಗಿದ್ದು ಕೆರೆಯಲ್ಲಿ ಈಕೆಯ ಮೃತದೇಹ ಪತ್ತೆಯಾಗಿದೆ. ಈಕೆಯ ಸಾವಿಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *