ಶಿವಮೊಗ್ಗ: ಜಿಲ್ಲೆಯಲ್ಲಿ ಐಸಿಸ್ ಜೊತೆ ನಂಟಿರುವ ಮೂವರು ಶಂಕಿತ ಉಗ್ರರ ಬಂಧನ ಮಾಡಲಾಗಿದೆ. ತೀರ್ಥಹಳ್ಳಿಯ ಶಾರಿಕ್ ಮತ್ತು ಶಿವಮೊಗ್ಗದ ಸೈಯದ್ ಯಾಸಿನ್ ಅಲಿಯಾಸ್ ಬೈಲುನನ್ನು ಬಂಧಿಸಲಾಗಿದ್ದು, ಮಂಗಳೂರಿನ ಮಾಜ್ ಪರಾರಿಯಾಗಿದ್ದಾನೆ.
ದೇಶದ ಐಕ್ಯತಾ, ಭದ್ರತೆಗೆ ಧಕ್ಕೆ ತರುವ ಸಲುವಾಗಿ ಭಯೋತ್ಪಾದಕ ಕೃತ್ಯಕ್ಕೆ ಒಳಸಂಚು ನಡೆಸಿರುವ ಆರೋಪದ ಮೇಲೆ ಈ ಮೂವರನ್ನು ಬಂಧಿಸಲಾಗಿದೆ. ರಾಷ್ಟ್ರಧ್ವಜ ಸುಟ್ಟ ಕೇಸ್ನಲ್ಲಿ ಯಾಸಿನ್ನನ್ನ ವಿಚಾರಣೆ ನಡೆಸಲಾಗಿತ್ತು. ಅಲ್ಲದೇ ಶಂಕಿತ ಉಗ್ರರಿಂದ ಸ್ಫೋಟಕಗಳನ್ನ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಂಕಿತರು ಐಸಿಸ್ ಉಗ್ರರ ಜೊತೆ ಉಗ್ರ ಚಟುವಟಿಕೆ ಬಗ್ಗೆ ಟ್ರೈನಿಂಗ್ ಪಡೆದಿದ್ದರು. ಐಸಿಸ್ ಜೊತೆ ಸಂಪರ್ಕ ಹೊಂದಿದ್ದರ ಬಗ್ಗೆ ಸಾಕ್ಷಿ ಕೂಡ ಲಭ್ಯವಾಗಿದ್ದು, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಕುರಿತು ಪೊಲೀಸರು ತೀವ್ರ ವಿಚಾರಣೆಯನ್ನು ನಡೇಸುತ್ತಿದ್ದಾರೆ.