ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಗಂಡ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:23 ರಿಂದ13:48ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:09 ರಿಂದ ಬೆಳಿಗ್ಗೆ 09:34 ರವರೆಗೆ, ಗುಳಿಕ ಕಾಲ ಬೆಳಿಗ್ಗೆ10:59 ರಿಂದ 12:23 ರವರೆಗೆ.
ಮೇಷ ರಾಶಿ : ಆರ್ಥಿಕತೆಯಲ್ಲಿ ಸ್ವಲ್ಪ ಚೇತರಿಕೆ ಇದ್ದು ನಿಮಗೆ ನೆಮ್ಮದಿಯೂ ಸಿಗಲಿದೆ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ. ನಿಮ್ಮ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಸಂಗಾತಿಯು ನಿಮ್ಮ ನಡವಳಿಕೆಯನ್ನು ಪ್ರಶ್ನಿಸಬಹುದು. ಸ್ನೇಹಿತರು ನಿಮ್ಮ ಜೊತೆಗಿರುವುದು ನಿಮಗೆ ಧೈರ್ಯ ಬರಲಿದೆ. ಯಾರನ್ನೂ ಇಂದು ಸುಲಭವಾಗಿ ಹತ್ತಿರ ಸೇರಿಸಿಕೊಳ್ಳಲಾರಿರಿ.
ವೃಷಭ ರಾಶಿ :ಇಂದು ಅಸ್ಥಿರತೆಯು ನಿಮ್ಮನ್ನು ಅಧಿಕವಾಗಿ ಕಾಡಬಹುದು. ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ವ್ಯವಹಾರದಲ್ಲಿ ಇಂದು ನಿಮ್ಮ ಚುರುಕುತನ ಸಾಕಾಗದು. ಇನ್ನೊಬ್ಬರ ಸಂತೋಷಕ್ಕೆ ಸುಳ್ಳು ಹೇಳುವ ಸಾಧ್ಯತೆ ಇದೆ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದು ಹಳೆಯ ತಪ್ಪಿಗೆ ನೀವು ಪಶ್ಚಾತ್ತಾಪ ಪಡಪಡುವಿರಿ.
ಮಿಥುನ ರಾಶಿ : ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ವ್ಯಕ್ತಿತ್ವದಲ್ಲಿ ಬದಲಾದಂತೆ ಕಾಣುವಿರಿ. ಇಂದು ನೀವು ಅಂದುಕೊಂಡಷ್ಟು ಕೆಲಸವು ಆಗುವತನಕ ಫಲವನ್ನು ಬಿಡುವುದಿಲ್ಲ. ಧಾರ್ಮಿಕ ಕರ್ಮಗಳನ್ನು ಶ್ರದ್ಧೆಯಿಂದ ಪೂರೈಸುವಿರಿ.
ಕರ್ಕಾಟಕ ರಾಶಿ : ನಿಮ್ಮ ಅಂದಾಜಿನ ಆದಾಯವನ್ನು ತಲುಪುವಿರಿ. ವಿಳಂಬವಾಗಿ ನಡೆಯುವ ವಿವಾಹಕ್ಕೆ ಸಂತೋಷವಿರಲಿದೆ. ನಿಮಗೆ ಸ್ವಾಭಿಮಾವನ್ನು ಬಿಟ್ಟು ವ್ಯವಹರಿಸುದು ಸಾಧ್ಯವಾಗದು. ಸಂಕೋಚದ ಸ್ವಭಾವದಿಂದ ನೀವು ಬಂದ ಅವಕಾಶವನ್ನು ಕೈ ಬಿಡುವಿರಿ. ಕೆಲವರು ನಿಮ್ಮ ಮಾತನ್ನು ವಿರೋಧಿಸುವರು. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಬದಲಾಗಬಹುದು.
ಸಿಂಹ ರಾಶಿ :ರಾಜಕಾರಣದ ದಿಕ್ಕು ನಿಮಗೆ ಅರ್ಥವಾಗುವುದು ಕಷ್ಟ. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಪಕ್ಷಪಾತ ಮಾಡದೇ ನೀವು ಸಮಾನಭಾವದಿಂದ ಕಾಣಬೇಕಾದೀತು. ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ. ಉದರಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಂದು ಒದ್ದಾಡುವಿರಿ.
ಕನ್ಯಾ ರಾಶಿ :ನಿಮ್ಮ ನೋಟದ ಬಗ್ಗೆ ದೂರು ಬರಬಹುದು. ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ. ಎಲ್ಲ ವಿಚಾರಕ್ಕೂ ನೀವು ಇನ್ನೊಬ್ಬರನ್ನು ಹಗುರಾಗಿ ಕಾಣುವಿರಿ. ಬಿಡುವಿನ ಸಮಯದಲ್ಲಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳುವಿರಿ.
ತುಲಾ ರಾಶಿ :ನಿಮ್ಮ ಪದಾಧಿಕಾರವು ತಪ್ಪುವ ಸಾಧ್ಯತೆ ಇದೆ. ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು. ಇಂದು ನೀವು ಕೃತಜ್ಞತೆಯನ್ನು ಮರೆಯುವಿರಿ.
ವೃಶ್ಚಿಕ ರಾಶಿ :ನೋವಾಗುವಂತೆ ಇಂದು ಮಾತನಾಡಿ ಅನಂತರ ಕ್ಷಮೆಯನ್ನು ಕೇಳುವ ಹಾಗೆ ನಟನೆ ಮಾಡುವಿರಿ. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ನಿಮ್ಮ ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ ಮೇಲೆ ಆಗದೇಹೋದೀತು. ನೀವು ಮಾತನ್ನು ಕಡಿಮೆ ಮಾಡುವುದು ಉತ್ತಮ. ಕೂಡಿಬರುವ ವಿವಾಹಭಾಗ್ಯವನ್ನು ನೀವು ಒಪ್ಪಿಕೊಳ್ಳುವಿರಿ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು.
ಧನು ರಾಶಿ : ನಿಮಗೆ ಕೆಲವು ವಿಚಾರದಲ್ಲಿ ಕಾನೂನಿನ ತೊಂದರೆ ಕಾಡಬಹುದು. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಅನಾಥಪ್ರಜ್ಞೆಯು ಕಾಡಲಿದ್ದು ದುಃಖವನ್ನು ನಿಯಂತ್ರಿಸುವಿರಿ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ಅಸಭ್ಯ ಮಾತುಗಳಿಂದ ನಿಮ್ಮ ನಡವಳಿಕೆಯು ಗೊತ್ತಾಗುವುದು. ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಗೊತ್ತಾಗುವುದು. ಭವಿಷ್ಯದ ಬಗ್ಗೆ ನಿಮಗೆ ಏನೇನೋ ಆಲೋಚನೆಗಳು ಬರಬಹುದು.
ಮಕರ ರಾಶಿ :ಮಾತಿನ ಅಸ್ಪಷ್ಟತೆಯು ಕೇಳುಗರಿಗೆ ಕಷ್ಟವಾದೀತು. ಸಣ್ಣ ವ್ಯಾಪಾರಿಗಳಿಗೆ ಅಲ್ಪ ಲಾಭವು ಆಗುವುದು. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ತಮ್ಮ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಿಯಾರು. ನಿಮ್ಮ ಕಾರ್ಯಕ್ಕೆ ವಿರೋಧಿಗಳ ಪ್ರಶಂಸೆಯೂ ಸಿಗಬಹುದು.
ಕುಂಭ ರಾಶಿ :ಸ್ಪರ್ಧೆಯಲ್ಲಿ ಸೋಲುವುದು ಸೋಲಲ್ಲ, ಮುಂದೆ ಸಾಗದಿರುವುದೇ ಸೋಲು. ಅಪರಿಚಿತರ ಜೊತೆ ಸಲುಗೆಯಿಂದ ಇರುವಿರಿ. ಆಲಸ್ಯವು ನಿಮಗೆ ಎಲ್ಲ ಕಾರ್ಯದಲ್ಲಿ ಹಿನ್ನಡೆ ತಂದೀತು. ಆಪ್ತರ ಸಹವಾಸದಿಂದ ಉತ್ತಮ ವಸ್ತುಗಳ ಖರೀದಿ ಮಾಡುವಿರಿ. ಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗುವುದು.
ಮೀನ ರಾಶಿ :ಊಹಿಸದ ಕೆಲವನ್ನು ಪಡೆಯಬೇಕಾಗುವುದು. ಹಲವು ದಿನಗಳ ಹೋರಾಟದ ಫಲವಾಗಿ ನಿಮ್ಮ ಸ್ಥಳವನ್ನು ಪುನಃ ಪಡೆದುಕೊಳ್ಳುವಿರಿ. ತನ್ನವರ ಬಗ್ಗೆ ನಂಬಿಕೆ ಇರದು. ಮಾತನ್ನು ಕಡಿಮೆ ಮಾಡಿ ಏಕಾಂಗಿಯಾಗಿ ಇರುವಿರಿ. ನಿಮಗೆ ಹಲವು ದಿನಗಳಿಂದ ಬಯಸಿದ್ದು ಸಿಗಬಹುದು. ಸಜ್ಜನರ ಸಹವಾಸವನ್ನು ಇಷ್ಟಪಡುವಿರಿ. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ಮುಳುಗುವಿರಿ.