ದಿನಭವಿಷ್ಯ; ಸೋಮವಾರ, 02-12-2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನುರಾಧಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08:08 ರಿಂದ 09:33ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ ಮಧ್ಯಾಹ್ನ 12:22 ರವರೆಗೆ, ಗುಳಿಕ ಕಾಲ ಮಧ್ಯಾಹ್ನ01:47 ರಿಂದ 03:12 ರವರೆಗೆ.

ಮೇಷ ರಾಶಿ: ನಿಮ್ಮವರೇ ಆದರೂ ಸಲುಗೆ ಅತಿಯಾದೀತು. ನಿಮ್ಮ ಇಂದಿನ ಕಾರ್ಯವು ಜನರಿಂದ‌ ಮೆಚ್ಚುಗೆ ಪಡೆಯಬಹುದು. ಆರೋಗ್ಯವು ಉತ್ತಮಗೊಳಗಳುತ್ತ ಸಾಗುವುದು ತೃಪ್ತಿ ಕೊಡುವುದು. ಆಸ್ತಿಯನ್ನು ಮಾರಾಟ‌ಮಾಡುವ ಆಲೋಚನೆ ಇರಲಿದೆ. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಆಪ್ತರ ಸಲಹೆಯನ್ನು ಪಡೆದುಕೊಳ್ಳುವಿರಿ. ನಿಮ್ಮ ಮಾತುಗಳಲ್ಲಿ ಪರಿಷ್ಕಾರವು ಇತರರಿಗೆ ಕಾಣಿಸುವುದು. 

ವೃಷಭ ರಾಶಿ: ಸ್ಪರ್ಧಾತ್ಮಕ‌ ಕಾರ್ಯಗಳಿಗೆ ಬಹಳ ಉತ್ಸಾವಿರುವುದು. ಗಂಧದ ಜೊತೆ ಗುದ್ದಾಟ‌ಮಾಡಿದರೆ ಮೈ ಸುಗಂಧವಾಗುವುದು. ಯಾವ ತೊಂದರೆಯನ್ನೂ ಹಂಚಿಕೊಳ್ಳಲಾರಿರಿ. ಸಿಟ್ಟನ್ನು ಬಿಟ್ಟು ಶಾಂತವಾಗಿ ಸಮಾಧಾನ ಚಿತ್ತದಿಂದ ಮಾತನಾಡಿ. ನೆರಹೊರೆಯರ ಸಂಕಷ್ಟಕ್ಕೆ ನೀವು ಇಂದು ನೆರವಾಗುವಿರಿ. ಅತಿಯಾದ ಆತ್ಮವಿಶ್ವಾಸದ ಜೊತೆ ಪೂರ್ವಾಪರಜ್ಞಾನವೂ ಇರಲಿ.

ಮಿಥುನ ರಾಶಿ: ದೃಷ್ಟಿ ದೋಷದ ಕಾರಣದಿಂದ ನಿಮಗೆ ಬೇಸರ ಉಂಟಾಗಬಹುದು. ನಿಧಾನವಾದರೂ ಇಂದಿನ ಕೆಲಸವನ್ನು ಮಾಡಿ.‌ ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲ‌ಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕ್ಕೆ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. 

ಕರ್ಕಾಟಕ ರಾಶಿ; ವ್ಯವಹಾರದ ಪ್ರಜ್ಞೆ ಇಲ್ಲದವರ ಜೊತೆ ವ್ಯಾಪಾರ ಕಷ್ಟವಾಗಬಹುದು. ಇನ್ನೊಬ್ಬರನ್ನು ಬೆಳೆಸುವ ಉತ್ಸಾಹ ಯೋಜನೆ ನಿಮ್ಮಲ್ಲಿ ಇರುವುದು. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಬೇಡ. ಇನ್ನೊಬ್ಬರ ಮಾತನ್ನು‌ ಕೇಳುವ ಸಹನೆ ಇರಲಿ. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. 

ಸಿಂಹ ರಾಶಿ: ಅಧಿಕಾರಿ ವರ್ಗದಿಂದ ಒತ್ತಡ ಹೆಚ್ಚಾಗುವುದು. ಪ್ರಯಾಣದಲ್ಲಿ ನಿಮಗೆ ಏನಾದರೂ ತೊಂದರೆ ಕಾಣಿಸೀತು. ನಿಮ್ಮ ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ವಾಹನದ ಕಾರಣಕ್ಕೆ ಮನೆಯಲ್ಲಿ ಕಲಹವಾಗಬಹುದು. ಹೂಡಿಕೆಯಿಂದ ನಿಮಗೆ ಲಾಭಾಂಶವು ಸಿಗುವುದು. ಯಾರನ್ನೋ ಸಂಶಯಿಸುತ್ತ ಕುಳಿತುಕೊಳ್ಳುವಿರಿ.

ಕನ್ಯಾ ರಾಶಿ: ಬಹಳ ದಿನಗಳ ಅನಂತರ ಬಂಧುಗಳ ಭೇಟಿಯಾಗಲಿದೆ. ನಿಮ್ಮ ವಿರಾಮ ಸಮಯವನ್ನು ಯಾರಾದರೂ ಕಸಿದುಕೊಳ್ಳಬಹುದು. ನಿಮಗೆ ಸಂಬಂಧವಿಲ್ಲದ ವಿಚಾರದಲ್ಲಿ‌ ನೀವು ಹಣವನ್ನು ಕಳೆದುಕೊಳ್ಳುವಿರಿ. ದುರಭ್ಯಾಸವು ಅತಿಯಾಗಿ ಮನೆಯಲ್ಲಿ, ಬಂಧುಗಳಿಂದ ನಿಮಗೆ ನಿಂದನೆಯಾಗಲಿದೆ. ಯಾರದೋ ಮಾತನ್ನು ಕೇಳಿ ಇಂದು ಕುಟುಂಬದವರ ಜೊತೆ ಕಲಹವಾಡುವಿರಿ. 

ತುಲಾ ರಾಶಿ: ಭೋಗವಸ್ತುವಿನಿಂದ ದುಃಖವಾಗುವುದು. ಭಿನ್ನ ಮನಸ್ಸುಗಳ ಜೊತೆ ನಿಮಗೆ ಹೊಂದಾಣಿಕೆ ಅಸಾಧ್ಯನಿಮ್ಮ ಮೇಲೆ ಇತರರ ದೃಷ್ಟಿ ಬೀಳುವ ಸಾಧ್ಯತೆ ಇರದು. ಜಾಣ್ಮೆಯು ಇಂದು ನಿಮ್ಮ ಉಪಯೋಗಕ್ಕೆ ಬರುವುದು. ಸ್ತ್ರೀಯರು ಅವರಿಗೆ ಬೇಕಾದ ಕಾರ್ಯವನ್ನು ಬಹಳ ನಾಜೂಕಿನಿಂದ ಮಾಡಿಸಿಕೊಳ್ಳುವರು. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ಹೆಚ್ಚು ಕಾಣಿಸಿಕೊಳ್ಳುವಿರಿ. 

ವೃಶ್ಚಿಕ ರಾಶಿ: ನಿಮ್ಮ ಸ್ಥಾನವು ಉನ್ನತವಾಗಲು ಆಸೆಪಡುವಿರಿ. ವಿದೇಶದ ವ್ಯವಹಾರದಲ್ಲಿ ನಿಮಗೆ ವ್ಯಾಪಕತೆ ಸಿಗಲಿದೆ. ಮಾನಸಿಕ ಒತ್ತಡದಿಂದ ನೀವು ಹೊರಬರಲು ಕಷ್ಟವಾದೀತು. ಖರ್ಚಿನ ಮೇಲೆ‌‌ ನಿಯಂತ್ರಣ ಸಾಧಿಸಬೇಕೆಂದಿದ್ದರೂ ಮತ್ತೆಲ್ಲೋ ಹರಿದು ಹೋಗುವುದು. ವೈವಾಹಿಕ ಜೀವನದ ಸುಖವು ಸಪ್ಪೆ ಎನಿಸಬಹುದು. ಭೂಮಿಯ ವ್ಯವಹಾರಕ್ಕೆ ಯಾರ ಜೊತೆಗಾದರೂ ಸೇರಿಕೊಳ್ಳುವಿರಿ. 

ಧನು ರಾಶಿ: ಉಪ್ಪಿನ ಋಣವನ್ನು ತೀರಿಸುವ ಅವಕಾಶ ಬರಲಿದೆ. ಮಕ್ಕಳು ಧೃತಿಗೆಡದಂತೆ ಅವರಿಗೆ ಧೈರ್ಯವನ್ನು ತುಂಬುವ ಅನಿವಾರ್ಯತೆ ಇದೆ. ಪ್ರಭಾವೀ ವ್ಯಕ್ತಿಗಳಿಂದ ಇಂದಿನ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲ್ಲಿ ಹೆಚ್ಚು ಮಾತನಾಡುವಿರಿ. 

ಮಕರ ರಾಶಿ: ಗುರಿಯ ಬಗ್ಗೆ ನಿಮಗೆ ಸರಿಯಾದ ಚಿತ್ರಣ ಸಿಗದು. ದೈವಾನುಗ್ರಹವಿದ್ದರೆ ಏನನ್ನೂ ಸಾಧಿಸಬಹುದು ಎಂಬ ಆತ್ಮವಿಶ್ವಾಸವು ಇರುವುದು. ಇಂದು ನಿಮ್ಮ ಮನಸ್ಸು ಭಯದಿಂದ ಹಿಂದೇಟು ಹಾಕಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಪವು ಹೆಚ್ಚಾಗಿರುವುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು.

ಕುಂಭ ರಾಶಿ: ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ‌ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ. ಅಸಾಮಾನ್ಯ ವಿಚಾರವನ್ನು ಸರಳೀಕರಿಸುವಿರಿ. ಇಂದು ಕೆಲವು ವಿಚಾರಕ್ಕೆ ನಿಮ್ಮ ಆಲಸ್ಯವು ವರವಾಗುವುದು. 

ಮೀನ ರಾಶಿ: ಹೊಸ ಯೋಜನೆಗಳು ನಿಮ್ಮ ಕೈ ಸೇರಬಹುದು. ನಿಮ್ಮ ನಿಮ್ಮಲ್ಲಿ ವಿನೀತ ಸ್ವಭಾವವಿದ್ದರೆ ಏನನ್ನೂ ಪಡೆಯಲು ಸಾಧ್ಯ. ನಿಮ್ಮನ್ನು ಭೇಟಿಯಾಗಲು ಬಂದವರನ್ನು ಸ್ತ್ರೀಯರು ನಿಮ್ಮ ಮೇಲೆ ಏನಾದರೂ ಆರೋಪ ಮಾಡಿಯಾರು. ಪಕ್ಷಪಾತ ಮಾಡುವುದು ಬೇಡ. ಸಂಬಂಧಿಸಿದ ವಿಚಾರಕ್ಕೆ ನಿಮ್ಮ ಸಮರ್ಥನೆ ಇರಲಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.‌