ದಿನ ಭವಿಷ್ಯ; ಸೋಮವಾರ 28-10-2024

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಐಂದ್ರ​​, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:55 ರಿಂದ 09:22 ರವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:49 ರಿಂದ ಮಧ್ಯಾಹ್ನ 12:16ರವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:10 ರವರೆಗೆ.

ಮೇಷ ರಾಶಿ: ಇಂದು ಯಾವ ನಿರ್ಧಾರವನ್ನೂ ಸ್ವತಂತ್ರವಾಗಿ ಮಾಡುವುದು ಕಷ್ಟ. ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ.ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಯನ್ನು ಗಳಿಸುವಿರಿ. ಸಂಗಾತಿಯ ನಿಲುವನ್ನು ಬೆಂಬಲಿಸುವಿರಿ. ತಾಳ್ಮೆಯಿಂದಲೇ ಮಾತನಾಡಿ. ಬಾಕಿ ಉಳಿದ ಕಛೇರಿಯ ಕಾರ್ಯಗಳನ್ನು ಮಾಡುವಿರಿ.ಇಂದು ವಿಘಟನೆಗೆ ಆಗಲು ಅವಕಾಶವು ಕೊಡುವುದು ಬೇಡ.

ವೃಷಭ ರಾಶಿ: ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕೆಂದರೂ ಆಗದು. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಕುಟುಂಬದಲ್ಲಿ ಅನಿರೀಕ್ಷಿತ ತಿರುವು ಬರಲಿದೆ. ಅನಾರೋಗ್ಯದಿಂದ ಕಷ್ಟಪಡುವಿರಿ. ಯಾರಾದರೂ ನಿಮ್ಮ ಗುಟ್ಟನ್ನು ಹೊರಹಾಕಬಹುದು. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.

ಮಿಥುನ ರಾಶಿ: ಉನ್ನತ ವಿದ್ಯಾಭ್ಯಾಸಕ್ಕೆ ಕಾಲ ಕೂಡಿಬರದು. ಸರ್ಕಾರಿ ಉದ್ಯೋಗಕ್ಕೆ ನಿಮ್ಮ ಶ್ರಮ‌ ಸಾಕೆನಿಸಬಹುದು. ಮಾತುಗಾರಿಗೆ ಹಿನ್ನಡೆಯಾಗಲಿದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುವಿರಿ. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿರಿಯರ ಎದುರು ವಿನಯದಿಂದ ಮಾತನಾಡಿ.

ಕರ್ಕಾಟಕ ರಾಶಿ: ನಿಮಗೆ ಗೌರವವು ಸಿಗದ ಕಡೆ ನೀವು ಹೋಗಲು ಇಷ್ಟಪಡುವುದಿಲ್ಲ. ನಿಮ್ಮ ಗಟ್ಟಿಯಾದ ಮಾತು ಮಕ್ಕಳಿಗೆ ಅತಿಯಾಗಬಹುದು. ಅತಿಯಾದ ಮಾತು ನಿಮಗೆ ಕಿರಿಕಿರಿ ಅನಿಸೀತು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ.ಸೂಕ್ಷ್ಮ ಕೆಲಸವನ್ನು ಮಾಡಲು ತಾಳ್ಮೆ ಇರದು.

ಸಿಂಹ ರಾಶಿ: ಎಂತಹ ಏಕಾಂತವೂ ನಿಮ್ಮ ಮನಸ್ಸಿಗೆ ಕಿರಿಕಿರಿ ತರುವುದು. ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನಪಟ್ಟುಕೊಳ್ಳುವಿರಿ. ನಿದ್ರೆಯಲ್ಲಿ ಕಂಡ ಕನಸಿನಿಂದ ಭೀತರಾಗುವಿರಿ. ಒಂಟಿತನದ ಆಲೋಚನೆಯು ಪೂರ್ಣವಾಗದು. ಚರಾಸ್ತಿಯನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕು. ಅತಿಯಾದ ಫಲದ ನಿರೀಕ್ಷೆಯಲ್ಲಿ ಇರುವುದು ಬೇಡ.

ಕನ್ಯಾ ರಾಶಿ:ಯಾರದೋ ವಿಚಾರಕ್ಕೆ ನೀವು ಸಮಯವನ್ನು ಕೊಡಬೇಕಾಗುವುದು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಸಲ್ಲಿಸಿ. ಉತ್ಸಾಹದಿಂದ ಹೊರಟ ಕಾರ್ಯಕ್ಕೆ ತಡೆಯಾಗುವ ಸಂಭವ ಬರುವುದು. ಸಂತೋಷದ ಸಂದರ್ಭಗಳನ್ನು ನೆನಪಿಸಿಕೊಳ್ಳುವಿರಿ. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಬಹುದು. 

ತುಲಾ ರಾಶಿ: ಇಂದು ನಿಮ್ಮ ಅಂದಾಜು ಲೆಕ್ಕ ವ್ಯತ್ಯಸವಾಗುವುದು. ನಿಮ್ಮ ಪಟ್ಟ ಶ್ರಮಕ್ಕೆ ಈಗ ಗೌರವವನ್ನು ಪಡೆದುಕೊಳ್ಳುವಿರಿ.ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು. ಬೀಳುವ ನಿಮ್ಮನ್ನು ಯಾರಾದರೂ ರಕ್ಷಿಸಿಯಾರು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ವೇಗದ ಚಾಲನೆ ಬೇಡ.

ವೃಶ್ಚಿಕ ರಾಶಿ: ಅಧಿಕಾರಕ್ಕೆ ತಕ್ಕ ಹಿಡಿತವು ನಿಮ್ಮಲ್ಲಿ ಇರದು. ಒಂದೇ ಸಮಯಕ್ಕೆ ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ವಾಗಲಿದೆ. ನೀವು ಏಕಾಂಗಿ ಎಂಬ ಮನೋಭಾವವು ಬರಲಿದೆ. ಅಂತಃಕರಣ ಶುದ್ಧಿಯು ವಿಶ್ವಾಸವನ್ನು ಹೆಚ್ಚಿಸುವುದು. ಉತ್ಸಾಹಕ್ಕೆ ನಿಮ್ಮದೇ ಆದ ಕಾರಣವನ್ನು ಕಂಡುಕೊಳ್ಳಬೇಕು. ಸುಮ್ಮನೇ ಇದ್ದರೆ ಆಗದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ. 

ಧನು ರಾಶಿ: ನಿಮ್ಮದೇ ಸತ್ಯವೆಂದು ವಾದಿಸುವುದು ಸರಿಯಾಗದು. ಬಂಧುಗಳ ಜೊತೆ ಔಚಿತ್ಯಪೂರ್ಣವಾದ ಮಾತುಗಳನ್ನು ಆಡಿ. ನಿಮ್ಮ ವೈಫಲ್ಯವನ್ನು ಸರಿ ಮಾಡಿಕೊಳ್ಳಿ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಗೌರವವು ಕಡಿಮೆ ಆಗಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮಿಸುವಿರಿ.

ಮಕರ ರಾಶಿ: ನಿಮ್ಮ‌ ಮಾತಿಗೆ ಬೆಲೆಯು ಕಡಿಮೆ ಆಗಬಹುದು. ಯಾರನ್ನೂ ಅಪಹಾಸ್ಯ ಮಾಡುವುದು ಬೇಡ. ದೇವರ ಮೇಲೆ‌ ಶ್ರದ್ಧೆಯು ಅಧಿಕವಾಗುವುದು. ಮಾತುಗಾರರಾಗಿದ್ದರೆ ಉತ್ತಮ‌ ಅವಕಾಶಗಳು ಸಿಗಲಿವೆ. ಕೋಪವನ್ನು ತೋರಿಸುವುದು ಬೇಡ. ಮಾತಿನಲ್ಲಿ ಅಧಿಕಾರದ ಗತ್ತು ಕಾಣಿಸುವುದು.

ಕುಂಭ ರಾಶಿ: ಮನಸ್ಸು ಬಹಳ ಚಂಚಲವಾಗುವುದು. ಕೇಳಿದವರಿಗೆ ಸಹಾಯವನ್ನು ಮಾಡುವಿರಿ. ಸಂಶೋಧನೆಯಲ್ಲಿ ನಿಮಗೆ ಆಸಕ್ತಿ ಬರಬಹುದು.ನಿಮ್ಮ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.

ಮೀನ ರಾಶಿ: ಬಂಧುಗಳ ಭೇಟಿಯು ಸಂತೋಷವನ್ನು ಕೊಡುವುದು. ಸ್ನೇಹವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾರಿರಿ. ಸ್ನೇಹವು ಸ್ನೇಹವಾಗಿಯೇ ಇರಲಿ, ಯಾವ ನಿರೀಕ್ಷೆಯೂ ಬೇಡ. ಭಾವನಾತ್ಮಕ ವಿಚಾರಗಳಿಗೆ ಕರಗುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ. ಮನೆಯವರ ಮನ ನೋಯಿಸಿ ಕಾರ್ಯ ಮಾಡಲಾಗದು. ಇಂದಿನ ಪ್ರತಿ ಕ್ಷಣವನ್ನೂ ಆನಂದಿಸುವಿರಿ.