ಜಾಖ್ ಗಡಿ ಪ್ರದೇಶದಲ್ಲಿ ಶಂಕಿತ ಪಾಕಿಸ್ತಾನಿ ಡ್ರೋನ್ ಹಾರಾಟ: ವಿಶೇಷ ಕಾರ್ಯಾಚರಣೆ ಗುಂಪಿನಿಂದ ಶೋಧ ಕಾರ್ಯಾಚರಣೆ

ಜಮ್ಮುಕಾಶ್ಮೀರ: ಸಾಂಬಾ ಜಿಲ್ಲೆಯ ಜಾಖ್‍ ಗಡಿ ಪ್ರದೇಶದಲ್ಲಿ ಗ್ರಾಮಸ್ಥರು ಸಂಭಾವ್ಯ ಡ್ರೋನ್ ಬಗ್ಗೆ ಮಾಹಿತಿ ನೀಡಿದ ವಿಶೇಷ ಕಾರ್ಯಾಚರಣೆ ಗುಂಪು ಭಾನುವಾರ ಶೋಧ ಕಾರ್ಯಾಚರಣೆ ನಡೆಸಿದೆ.

ಪಾಕಿಸ್ತಾನವು ಸಾಂಬಾದಲ್ಲಿ ಮತ್ತೊಂದು ಡ್ರೋನ್ ಪಿತೂರಿ ನಡೆಸಿದೆ. ಈ ಪ್ರದೇಶದಲ್ಲಿ ಡ್ರೋನ್ ಕಾಣಿಸುತ್ತಿರುವ ಬಗ್ಗೆ ಗ್ರಾಮಸ್ಥರು ನಮಗೆ ಮಾಹಿತಿ ನೀಡಿದ್ದರು. ಇದರ ಹಿನ್ನೆಲೆ ಶೋಧ ಕಾರ್ಯ ನಡೆಯುತ್ತಿದೆ. ರಕ್ಷಣಾ ಮೂಲಗಳ ಪ್ರಕಾರ ಪಾಕಿಸ್ತಾನದಿಂದ ಡ್ರೋನ್ ಶನಿವಾರ ಸಂಜೆ ಭಾರತದ ಭೂಪ್ರದೇಶವನ್ನ ಪ್ರವೇಶಿಸಿದ್ದು, ಇದು ಸ್ಥಳೀಯರು ಮತ್ತು ಭದ್ರತಾ ಪಡೆಗಳ ಆತಂಕಕ್ಕೆ ಕಾರಣವಾಗಿತ್ತು ಎಂದು ಎಸ್‌ಒಜಿಯ ಡಿಎಸ್ ಪಿ ಘರು ರಾಮ್ ತಿಳಿಸಿದ್ದಾರೆ.

ಸಾಂಬಾ ಸೆಕ್ಟರ್ ನ ಗಡಿ ಗ್ರಾಮ ಸಾರಥಿ ಕಲಾನ್ ನಲ್ಲಿ ಡ್ರೋನ್ ಪತ್ತೆಯಾಗಿದೆ ಎಂದು ಉಪ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ. ಬಳಿಕ ಈ ಡ್ರೋನ್ ಚಕ್ ದುಲ್ಮಾದಿಂದ ಹೊಳೆಯುವ ಬಿಳಿ ಬೆಳಕಿನೊಂದಿಗೆ ಡೇರಾ ಮತ್ತು ಮದೂನ್ ಗ್ರಾಮಗಳ ಮೂಲಕ ಪಾಕಿಸ್ತಾನದ ಹೈದರ್ ಪೋಸ್ಟಿಗೆ ಮರಳಿತು ಎಂದು ಹೇಳಲಾಗಿದೆ.