ನದಿಗೆ ಬಿದ್ದ ಬಸ್: 7 ಜನರ ದುರ್ಮರಣ, 47 ಮಂದಿಗೆ ಗಾಯ

ಜಾರ್ಖಂಡ್: ಬಸ್ ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಆರು ಜನ ಮಹಿಳೆಯರು ಸೇರಿ ಒಟ್ಟು 7 ಜನ ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನ ಹಜಾರಿಬಾಗ್‌ನಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ 47 ಮಂದಿ ಗಾಯಗೊಂಡಿದ್ದಾರೆ.

ಇಲ್ಲಿನ ಗಿರಿದಿಹ್‌ನಿಂದ ರಾಂಚಿಗೆ ಬಸ್ ತೆರಳುತ್ತಿರುವಾಗ ಸಿವಾನ್ ನದಿಗೆ ಬಿದ್ದಿದೆ. ಈ ಬಸ್​ನಲ್ಲಿ ಸುಮಾರು 55 ಜನರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ನದಿಗೆ ಬಿದ್ದಿದ್ದರಿಂದ ಬಸ್​ನಲ್ಲಿದ್ದ ಆರು ಜನ ಮಹಿಳೆಯರು, ಓರ್ವ ಪುರುಷ ಸಾವನ್ನಪ್ಪಿದ್ದಾರೆ.

ಘಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಂಡು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.