ನವದೆಹಲಿ: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಕೋವಿಡ್ -19 ದೃಢಪಟ್ಟಿದೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಈ ಕಾರಣದಿಂದಾಗಿ ಸೆ. 20 ರಿಂದ ಮೊಹಾಲಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಶಮಿ ಹೊರಗುಳಿಯಲಿದ್ದಾರೆ. ಶಮಿ ಬದಲಿಗೆ ಉಮೇಶ್ ಯಾದವ್ ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ರೋಗಲಕ್ಷಣಗಳು ಸೌಮ್ಯವಾಗಿರುವುದರಿಂದ ಚಿಂತಿಸಬೇಕಾಗಿಲ್ಲ. ಅವರು ಪ್ರತ್ಯೇಕವಾಗಿದ್ದಾರೆ. ಗುಣಮುಖವಾದ ಬಳಿಕ ತಂಡಕ್ಕೆ ಮತ್ತೆ ಸೇರಲು ಸಾಧ್ಯ ವಾಗುತ್ತದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಸರಣಿಗೆ ಶಮಿ ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿ ಸುತ್ತಿದ್ದೇವೆ. ಆ ಸರಣಿ ಪ್ರಾರಂಭಕ್ಕೆ ಇನ್ನೂ 10 ದಿನಗಳಿವೆ. ಅದಕ್ಕೂ ಮುನ್ನ ಶಮಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲಗಳು ವಿಶ್ವಾಸ ವ್ಯಕ್ತಪಡಿಸಿದೆ.