ಟ್ರಕ್ ಮತ್ತು ಬಸ್ ಡಿಕ್ಕಿ: ‍6 ಮಂದಿ ಸಾವು, ಹಲವರಿಗೆ ಗಾಯ

ಒಡಿಶಾ: ಝಾರ್ಸುಗುಡದಲ್ಲಿ ಟ್ರಕ್ ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡ ಘಟನೆ ನಡೆದಿದೆ.

ಸಂಬಲ್‍ಪುರ-ಜಾರ್ಸುಗುಡ ಬಿಜು ಎಕ್ಸ್‌ಪ್ರೆಸ್‍ವೇನಲ್ಲಿ ಈ ಘಟನೆ ಸಂಭವಿಸಿದ್ದು, ಖಾಸಗಿ ಕಂಪನಿಯ ಪ್ಲಾಂಟ್ ಸೈಟ್‍ನಿಂದ ಝಾರ್ಸುಗುಡ ಪಟ್ಟಣಕ್ಕೆ ಕಾರ್ಮಿಕರು ಬಸ್‍ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಝಾರ್ಸುಗುಡ ಬೈಪಾಸ್ ರಸ್ತೆಯ ಪವರ್ ಹೌಸ್ ಚಾಕ್ ಬಳಿ ಕಲ್ಲಿದ್ದಲು ತುಂಬಿದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಬಸ್‍ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಸ್ಥಳಾಂತರಿಸಲಾಗಿದೆ .