ಬೆಂಗಳೂರು: ರಾಜಧಾನಿಯಲ್ಲಿ ಒತ್ತುವರಿ ತೆರವು ಕಾರ್ಯ ವೇಗ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದು, ಇಂದು ದಾಸರಹಳ್ಳಿ ವಲಯದಲ್ಲಿ ಒತ್ತುವರಿ ತೆರವು ಆಪರೇಷನ್ ನಡೆಸಲಾಗುತ್ತಿದೆ.
ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿ ನಗರದಲ್ಲಿ 3 ಎಕರೆ ಕಾಲು ಕುಂಟೆ ಜಾಗದ ಒತ್ತುವರಿ ತೆರವು ಕಾರ್ಯ ಮಾಡಲಾಗುತ್ತಿದೆ. ಕಾಲುವೆ ಮೇಲೆ ಕಟ್ಟಿರುವ ಮನೆ, ಕಟ್ಟಡಗಳನ್ನು ತೆರವು ಮಾಡಲಾಗಿದ್ದು, ಮಾಲೀಕರು ಕಟ್ಟಡ ಒಡೆಯಲು ಸಮಯಾವಕಾಶ ಕೋರಿದ್ಧಾರೆ. ಜೆಸಿಬಿಯಿಂದ ತೆರವು ಮಾಡಲಾಗದ ಜಾಗಗಳಲ್ಲಿ ಬಿಬಿಎಂಪಿಯು 20 ಸಿಬ್ಬಂದಿಗಳ ಮೂಲಕ ಕಾರ್ಯಾಚರಣೆ ನಡೆಸಿದೆ. ಈ ಕುರಿತು ದಾಸರಹಳ್ಳಿ ವಲಯ ಜಂಟಿ ಆಯುಕ್ತ ಜಗದೀಶ್ ಚಂದ್ರ ಮಾಹಿತಿ ನೀಡಿದ್ಧಾರೆ.