ಗಾಳಿ-ಮಳೆಗೆ ಕುಸಿದು ಬಿದ್ದ ಮನೆ

ಸಿದ್ದಾಪುರ: ಭಾರೀ ಮಳೆಯಿಂದಾಗಿ ತಾಲೂಕಿನ ವಂದಾನೆ ಬಳಿಯ ಶೀರೂರಿನಲ್ಲಿ ಮನೆ ಬಿದ್ದು ಹಾನಿಯಾಗಿದೆ.
ಶಿರೂರಿನ ಲೋಕೇಶ ತಿಮ್ಮಾ ನಾಯ್ಕ ಎಂಬುವರಿಗೆ ಸೇರಿದ ವಾಸ್ತವ್ಯದ ಮನೆ ಮಳೆ-ಗಾಳಿಗೆ ಧರಶಾಹಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಮನೆಯಲ್ಲಿದ್ದ ದಿನಸಿ ಮತ್ತಿತರ ಸಾಮಗ್ರಿ ನಾಶವಾಗಿದ್ದು, ಅಪಾರ ಹಾನಿಯಾಗಿದೆ.