ಮಂಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ

ಹೊನ್ನಾವರ: ಪಕ್ಷ ಸಂಘಟನೆಯಾಗಲು ಪ್ರತಿ ಸೆಲ್ ಸಮಿತಿಗಳು ಕ್ರಿಯಾಶೀಲತೆಯಿಂದ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕ ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕಿನ ಮಂಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಪಕ್ಷಕ್ಕಾಗಿ ಸಮಯ ಮೀಸಲಿಡಿ, ಸಂಘಟನೆಯಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯ. ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಎಲ್ಲರ ಮನಸ್ಸು ಒಂದುಗೂಡಿಸುವ, ದೇಶ ಕಟ್ಟುವ, ಐತಿಹಾಸಿಕ ‘ಭಾರತ ಜೋಡೋ’ ಯಾತ್ರೆಯಲ್ಲಿ ಭಾಗಿಯಾಗಿ ಪಕ್ಷಕ್ಕೆ ಬಲ ತುಂಬೋಣ ಎಂದರು.

ಪ್ರಾಸ್ತವಿಕ ಮಾತನಾಡಿದ ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ್ ಎಲ್ಲರ ಸಹಕಾರದಲ್ಲಿ ಮಂಕಿ ಬ್ಲಾಕ್ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ, ಪ್ರತಿ ಹಂತದ ಸಂಘಟನೆಯ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ಕೆಪಿಸಿಸಿ ಉಸ್ತುವಾರಿ ಪ್ರಕಾಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ರಮಾನಂದ ನಾಯಕ್, ಕೆಪಿಸಿಸಿ ಉಸ್ತುವಾರಿ ಮುರುಳಿ ಶೆಟ್ಟಿ, ನವೀನ್ ಚಂದ್ರ ಶೆಟ್ಟಿ, ಮುಖಂಡರಾದ ಅಬ್ಬಾಸ್ ತೊನ್ಸೆ, ಸಂತೋಷ ಶೆಟ್ಟಿ, ಬಸವರಾಜ್ ದೊಡ್ಮನೆ, ಶ್ರೀನಿವಾಸ್ ನಾಯ್ಕ್, ಕೃಷ್ಣ ಗೌಡ, ಯೋಗೇಶ್ ರಾಯ್ಕರ್, ಚಂದ್ರ ಗೌಡ ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.