ವೃದ್ಧೆಯ ಹೊಟ್ಟೆಯಲ್ಲಿದ್ದ 10 ಕೆ.ಜಿಯ ಗಡ್ಡೆ ಹೊರ ತೆಗದ ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಸಹನ್ ಕುಮಾರ

ಭಟ್ಕಳ: ವೃದ್ದೆಯ ಹೊಟ್ಟೆಯಲ್ಲಿದ್ದ ಸುಮಾರು 10 ಕೆ.ಜಿಯ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಯಶಸ್ವಿಯಾಗಿ ಹೊರತೆಗೆದು ವೃದ್ಧೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿರುವ ಘಟನೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಕುಮಟಾ ಬಗ್ಗೋಣ ಮೂಲದ 62 ವರ್ಷದ ಸಾವಿತ್ರಿ ಈಶ್ವರ ನಾಯ್ಕ ಎನ್ನುವ ವೃದ್ಧೆಯೋರ್ವರು ಕಳೆದ ಕೆಲ ದಿನಗಳಿಂದ  ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ  ಕುಮಟಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಕಂಡು ಬಂದಿತ್ತು. ಈ  ಹಿನ್ನೆಲೆ ಸಂಬಂಧಿಕರ ಸಲಹೆ ಮೇರೆಗೆ ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ. ಸಹನ್ ಎಸ್. ಕುಮಾರ ಬಳಿ ಚಿಕಿತ್ಸೆಗೆ ದಾಖಲಾಗಿದ್ದರು. ಅವರು ಇಂದು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಸುಮಾರು 10 ಕೆ.ಜಿಯ ಗಡ್ಡೆಯನ್ನು ಹೊರತೆಗೆದಿದ್ದಾರೆ. ಸದ್ಯ ವೃದ್ಧೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ವೇಳೆ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಹಾಗೂ ಸರ್ಜನ್ ಡಾ. ಅರುಣ ಕುಮಾರ ಶಸ್ತ್ರ ಚಿಕಿತ್ಸೆ ನಡೆಸಲು ಸಹಕರಿಸಿದ್ದಾರೆ.