ಮಾನವೀಯತೆ ಮೆರೆದ ಶಾಸಕ ದಿನಕರ ಶೆಟ್ಟಿ.!

ಕುಮಟಾ: ಅಧಿವೇಶನದ ನಿಮಿತ್ತ ವಿಧಾನಸೌಧಕ್ಕೆ ತೆರಳುತ್ತಿರುವ ವೇಳೆ ಮಾರ್ಗಮಧ್ಯೆ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿಯಾಗಿ ಮಹಿಳೆಯೋರ್ವಳು ರಸ್ತೆ ಮೇಲೆ ಬಿದ್ದಿರುವುದನ್ನು ಗಮನಿಸಿದ ಶಾಸಕ ದಿನಕರ ಶೆಟ್ಟಿ ತಮ್ಮ ಕಾರನ್ನು ನಿಲ್ಲಿಸಿ, ಪೊಲೀಸರಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಶಾಸಕ ದಿನಕರ ಶೆಟ್ಟಿ ಅವರು ಲೊಕೋಪಯೋಗಿ ಇಲಾಖೆಯ ಸಚಿವ ಸಿ. ಸಿ ಪಾಟೀಲರನ್ನು ಭೇಟಿಯಾಗಿ, ನಂತರ ವಿಧಾನಸೌಧದ ಕಡೆಗೆ ತೆರಳುತ್ತಿದ್ದರು. ಮಾರ್ಗಮಧ್ಯದಲ್ಲಿ ಮಹಿಳೆಯೋರ್ವಳ ದ್ವಿಚಕ್ರ ವಾಹನಕ್ಕೆ ಕಾರೊಂದು ಡಿಕ್ಕಿಯಾದ ಪರಿಣಾಮ ಆಕೆ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದಳು. ಇದನ್ನು ಗಮನಿಸಿದ ಶಾಸಕರು ತಮ್ಮ ಕಾರನ್ನು ನಿಲ್ಲಿಸಿ, ಅಪಘಾತಕ್ಕೀಡಾದ ಮಹಿಳೆಯ ಬಳಿಗೆ ತೆರಳಿ, ಕೂಡಲೇ ಆರಕ್ಷಕರಿಗೆ ಕರೆಮಾಡಿ ಆಕೆಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾನವೀಯತೆ ಮೆರೆದ ಶಾಸಕ ದಿನಕರ ಶೆಟ್ಟಿ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.