ಸಂಜೀವಿನಿ ಸಭಾಭವನದಲ್ಲಿ ಕಾಳಿ ಬ್ರೀಗೆಡ್ ನ 7 ನೇ ವಾರ್ಷಿಕ ಸಾಮಾನ್ಯ ಸಭೆ

ಜೋಯಿಡಾ: ಕಾಳಿ ಬ್ರೀಗೆಡ್ ನ 7 ನೇ ವಾರ್ಷಿಕ ಸಾಮಾನ್ಯ ಸಭೆ ಸೊಮವಾರ ತಾಲೂಕಿನ ಸಂಜೀವಿನಿ ಸಭಾಭವನದಲ್ಲಿ ನಡೆಯಿತು. ಮುಖ್ಯವಾಗಿ ಈ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ತಹಶೀಲ್ದಾರ ಕಚೇರಿಯ ಅವ್ಯವಸ್ಥೆ, ವನ್ಯ ಪ್ರಾಣಿಗಳಿಂದ ರೈತರಿಗೆ ಹಾನಿ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಬಗ್ಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಸಾರ್ವಜನಿಕರೊಡಗೂಡಿ ಹೋರಾಟ ನಡೆಸುವ ತಿರ್ಮಾನ ತೆಗೆದುಕೊಂಡರು.

ಸಭೆಯ ನಂತರ ತಹಶೀಲ್ದಾರ ಶೈಲೇಶ ಪರಮಾನಂದ ಅವರಿಗೆ ತಾಲೂಕಿನಲ್ಲಿ ನ್ಯಾಯಾಲಯ ಸ್ಥಾಪನೆ, ಬಸ್ ಡಿಪೊ, ತಾಲೂಕಾ ಸ್ಥಾನಮಾನ, ಸರಕಾರಿ ನೌಕರರಿಗಾಗಿ ವಸತಿ ವ್ಯವಸ್ಥೆ ಈ ನಾಲ್ಕು ಅವಶ್ಯಕತೆ ಬಗ್ಗೆ ಮನವಿ ನೀಡಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ ವಹಿಸಿದ್ದರು.ಈ ಸಂದರ್ಬದಲ್ಲಿ ಕಾಳಿ ಬ್ರೀಗೆಡ್ ಮುಖ್ಯ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಕಾರ್ಯದರ್ಶಿ ಪ್ರಭಾಕರ ನಾಯ್ಕ, ಸಂಜಿವನಿ ಸೇವಾ ಸಂಸ್ಥೆಯ ಅಧ್ಯಕ್ಷ ಸುನಿಲ ದೇಸಾಯಿ, ಸದಸ್ಯರಾದ ಕಿರಣ ನಾಯ್ಕ, ಅಜೀತ ಟೆಂಗ್ಸೆ ಮುಂತಾದವರು ಉಪಸ್ಥಿತರಿದ್ದರು.