ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷರಾಗಿ ನಗರಸಭಾ ಸದಸ್ಯ ಅನಿಲ ನಾಯ್ಕ್ ನೇಮಕಗೊಂಡಿದ್ಧಾರೆ. ಶಾಸಕ ಆರ್ ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ ಹಾಗೂ ಉ.ಕ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷ ಭೀಮಣ್ಣ ನಾಯ್ಕರ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್ ಪ. ಪಂಗಡ ವಿಭಾಗದ ರಾಜ್ಯಾಧ್ಯಕ್ಷ ಕೆ. ಪಿ ಪಾಲಯ್ಯನವರು ಈ ನೇಮಕ ಮಾಡಿದ್ದಾರೆ. ಅನಿಲ್ ನಾಯ್ಕ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಗೊಂಡಿದ್ದು, ನಗರಸಭಾ ಸದಸ್ಯರಾಗಿಯೂ ಕಾರ್ಯನಿವಾಹಿಸುತ್ತಿದ್ದಾರೆ.