ನವದೆಹಲಿ: ಹಿರಿಯ ವಕೀಲ ಮುಕುಲ್ ರೊಹಟಗಿ ಭಾರತದ ನೂತನ ಅಟಾರ್ನಿ ಜನರಲ್ ನೇಮಕವಾಗಿದ್ದಾರೆ. ಮುಕುಲ್ ಅಕ್ಟೋಬರ್ 1 ರಿಂದ ತಮ್ಮ ಸೇವೆಯನ್ನು ಆರಂಭಿಸಲಿದ್ದಾರೆ.
ಮುಕುಲ್ ರೊಹಟಗಿ ಭಾರತದ ಅತ್ಯಂತ ಉನ್ನತ ವಕೀಲರಲ್ಲಿ ಒಬ್ಬರು. ಅವರು 2014 ರ ಜೂನ್ನಿಂದ 2017 ರ ಜೂನ್ ವರೆಗೆ ಈ ಮೊದಲು ಸೇವೆ ಸಲ್ಲಿಸಿದ್ದರು. ಅವರ ನಂತರ ಕೆ ಕೆ ವೇಣುಗೋಪಾಲ್ ಅಧಿಕಾರ ವಹಿಸಿಕೊಂಡರು. ವೇಣುಗೋಪಾಲ್ ಅವರ ಅಧಿಕಾರಾವಧಿಯು ಸೆ. 30 ರಂದು ಕೊನೆಗೊಳ್ಳುತ್ತದೆ. ಇದೀಗ, ವೇಣುಗೋಪಾಲ್ ಸ್ಥಾನಕ್ಕೆ ಮುಕುಲ್ ರೋಹಟಗಿ ನೇಮಕವಾಗಿದ್ದಾರೆ. ಮುಕುಲ್ ಅವರು ಈ ಹಿಂದೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.