ಜಿಲ್ಲಾ ಪೊಲೀಸ್ ಸ್ಕ್ವಾಡ್ ಹಲ್ಲೆ ನಡೆಸಿಲ್ಲ: ದೂರು ನೀಡಿದರೆ ತನಿಖೆ ನಡೆಸಲಾಗುವುದು – ಎಸ್.ಪಿ ಸುಮನ ಪನ್ನೇಕರ್

ಕಾರವಾರ: ನಮ್ಮ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ ಎನ್ನುವ ಹಾಗೂ ಜಿಲ್ಲಾ ಪೊಲೀಸ್ ವಿಶೇಷ ಸ್ಕಾಡ್ ನಿರ್ದಿಷ್ಟ ಜಾತಿಯ ವ್ಯಕ್ತಿಯನ್ನು ಗುರಿಯಾಗಿಸಿ ಹಲ್ಲೆ ನಡೆಸಿದೆ ಎನ್ನುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ ಹೇಳಿದರು.

ಭಟ್ಕಳದಲ್ಲಿ ಶನಿವಾರ ನಾಮಧಾರಿ ಮುಖಂಡರು ಪತ್ರಿಕಾಗೋಷ್ಟಿ ನಡೆಸಿ, ಜಿಲ್ಲಾ ಸ್ಕ್ವಾಡ್ ತಂಡದ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್.ಪಿ. ಡಾ. ಸುಮನ ಪನ್ನೇಕರ್, ನಮ್ಮ ಸ್ಕ್ವಾಡ್ ಯಾವುದೇ ಆಸೆ ಆಮಿಷಗಳಿಗೆ ಬಗ್ಗದೇ ಕರ್ತವ್ಯ ನಿರ್ವಹಿಸುತ್ತಿದೆ. ಆರೋಪ ಮಾಡಿರುವಂತೆ ಯಾವುದೇ ಹಲ್ಲೆ ಮಾಡಿಲ್ಲ. ಸ್ಕ್ವಾಡ್ ಮೇಲೆ ಆರೋಪ ಮಾಡಿರುವವರು ಈ ಬಗ್ಗೆ ದೂರು ನೀಡಿದರೆ ತನಿಖೆ ಕೈಗೊಳ್ಳಲಾಗುವುದು. ಇದುವರೆಗೂ ಸ್ಕ್ವಾಡ್ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದೆಯೂ ಹೀಗೇ ಮುಂದುವರೆಸಲಿದೆ ಎಂದು ಹೇಳಿದರು.