ಪಿಕ್ನಿಕ್ ಗೆ ಬಂದಿದ್ದ ವ್ಯಕ್ತಿ ನೀರುಪಾಲು.! ಸಾಧ್ಯವಾಗದ ಮೃತದೇಹ ಪತ್ತೆ ಕಾರ್ಯ.!

ಸಿದ್ದಾಪುರ: ಪಿಕ್ನಿಕ್ ಗೆ ಬಂದಿದ್ದ ವ್ಯಕ್ತಿಯೋರ್ವ ನೀರುಪಾಲಾದ ಘಟನೆ ತಾಲೂಕಿನ ಗುಂಡಿಗದ್ದೆ ಫಾಲ್ಸ್ ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಕೋಲಾರದ ರಾಘವೇಂದ್ರ ಗೌಡ ಎಂಬ ವ್ಯಕ್ತಿ ನೀರುಪಾಲಾಗಿದ್ದಾನೆಂದು ಹೇಳಲಾಗಿದೆ. ತುಂಬಾ ಆಳವಾಗಿರುವುದರಿಂದ ಮೃತದೇಹವನ್ನು ಸಂಜೆವರೆಗೂ ಹೊರ ತೆಗೆಯಲಾಗಿಲ್ಲ. ಸಿದ್ದಾಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.