ಸೆ.11 ರಂದು ಮಾಜಿ‌ ಸಚಿವ ದಿ. ಪ್ರಭಾಕರ ರಾಣೆಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ

ಕಾರವಾರ: ರಾಜ್ಯ ಸರಕಾರದ ಮಾಜಿ ಮಂತ್ರಿ, ಕಾರವಾರ ಜೊಯಿಡಾದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ನೆರವಾಗಿ ಶಿಕ್ಷಣದ ಹರಿಕಾರ ಎಂದೇ ಹೆಸರಾದ ದಿ. ಪ್ರಭಾಕರ ಎಸ್. ರಾಣೆಯವರಿಗೆ ಕಾರವಾರದ ನಾಗರಿಕರ ಪರವಾಗಿ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಸೆ.11 ರಂದು ಭಾನುವಾರ ಸಂಜೆ 4.30 ಕ್ಕೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಭಾಕರ ರಾಣೆ ಅಭಿಮಾನಿಗಳು, ಕಾರವಾರದ ನಾಗರಿಕರು ಸೇರಿ ಈ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದು, ಆಸಕ್ತರು ಪಾಲ್ಗೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.