ವಿಜಯಪುರ: ಜಿಲ್ಲೆಯಲ್ಲಿ ಸುರಿದ ಮಳೆಯಿಂದ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಇನ್ನು ಹಳ್ಳ ತುಂಬಿ
ಕಳ್ಳಕವಟಗಿ ಘೋಣಸಗಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ
ವಾಹನಗಳು ಅದೇ ಮಾರ್ಗವಾಗಿ ತೆರಳುತ್ತಿವೆ.
ಇನ್ನು ಸಂಗಮನಾಥ ದೇವಸ್ಥಾನ ಜಲಾವೃತವಾಗಿದ್ದು
ದೇವಸ್ಥಾನದ ಆವರಣ ಹಾಗೂ ಗರ್ಭಗುಡಿಯಲ್ಲೂ ನೀರು ಹೊಕ್ಕಿದ್ದು ಸಂಗಮನಾಥ ದೇವರ ಗದ್ದುಗೆಯೂ ಜಲಾವೃತವಾಗಿದೆ. ಜಲಾವೃತಗೊಂಡ ನೀರಲ್ಲೇ ದೇವರಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಹಳ್ಳದಲ್ಲಿ ನೀರು ಏರಿಕೆಯಾಗುತ್ತಿದ್ದು ಭೀತಿ ಉಂಟಾಗಿದೆ.