ಮಂಗಳೂರು: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಮೇಲೆ ದಾಳಿ ನಡೆಸಲು ಸಂಚು ಮಾಡಿದ್ದ ಪ್ರಕರಣದ ತನಿಖೆ ಮಾಡುತ್ತಿರುವ ಎನ್‌ಐಎ ಅಧಿಕಾರಿಗಳು, ಗುರುವಾರ ಬೆಳ್ಳಂಬೆಳಗ್ಗೆ ಬಂಟ್ವಾಳದಲ್ಲಿ ಎಸ್‌ಡಿಪಿಐ-ಪಿಎಫ್ಐ ಮುಖಂಡ ರಿಯಾಜ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬಂಟ್ವಾಳದ ಬಿಸಿ ರೋಡ್ನಲ್ಲಿರುವ ರಿಯಾಜ್ ಮನೆ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ರಿಯಾಜ್ ಮೊಬೈಲ್ ವಶಕ್ಕೆ ಪಡೆದು, ಆತನ ವಿಚಾರಣೆ ಮಾಡುತ್ತಿದ್ದಾರೆ.
ಜು.15 ರಂದು ಬಿಹಾರದಲ್ಲಿ ಅಖ್ತರ್ ಫರ್ವೇಜ್ ಮತ್ತು ಮಹಮದ್ ಜಲಾಲುದ್ದೀನ್ ಎಂಬ ಇಬ್ಬರನ್ನು ಬಿಹಾರ ಎಟಿಎಸ್ ಬಂಧಿಸಿತ್ತು. ಇವರಿಬ್ಬರ ಜೊತೆ ರಿಯಾಜ್ ಸಂಪರ್ಕದಲ್ಲಿದ್ದ ಎನ್ನುವ ಮಾಹಿತಿಯ ಮೇರೆಗೆ ಎನ್ಐಎ ಈ ದಾಳಿ ನಡೆಸಿದೆ. ಎನ್‌ಐಎ ದಾಳಿಯನ್ನು ಖಂಡಿಸಿ ಎಸ್‌ಡಿಪಿಐ-ಪಿಎಫ್ಐ ಕಾರ್ಯಕರ್ತರು ‘ಎನ್ಐಎ ಗೋ ಬ್ಯಾಕ್’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.