ಸರಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಿದರೆ ಬಡವರ ಮಕ್ಕಳು ಕಲಿಯಲು ಅನುಕೂಲ – ಶಾಸಕ ಶಿವರಾಮ ಹೆಬ್ಬಾರ್

ಮುಂಡಗೋಡ: ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೂಲ ಸೌಕರ್ಯಗಳ ಕೊರತೆಯಾದರೆ ಪಾಲಕರು ಖಾಸಗಿ ಶಾಲೆಯತ್ತ ಹೆಜ್ಜೆ ಇಡುತ್ತಾರೆ. ಖಾಸಗಿ ಶಾಲೆಗಳಂತೆ ಸರಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿದರೆ ಬಡವರ, ಮಧ್ಯಮ ಕುಟುಂಬಗಳ ಮಕ್ಕಳು ಕಲಿಯಲು ಅನುಕೂಲವಾಗುತ್ತದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ.

ಅವರು ಪಟ್ಟಣದ ಸರಕಾರಿ ಶಾಸಕರ ಮಾದರಿ ಶಾಲೆಗೆ ಶಾಸಕರ ಪ್ರದೇಶಾಭಿವೃದಿ ಯೋಜನೆಯಡಿ ನೀಡಿರುವ 100 ಡೆಸ್ಕ್ ನೀಡಿರುವುದನ್ನು ಉದ್ಘಾಟಿಸಿ ಮಾತನಾಡಿ,
ಶಾಸಕರ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಇಲ್ಲದ ಕುರಿತು ಪತ್ರಿಕೆಗಳು ಬೆಳಕು ಚೆಲ್ಲಿದ್ದಕ್ಕೆ ತಾವು ಶಾಲೆಯ ಮುಖ್ಯ ಶಿಕ್ಷಕರನ್ನು ವಿಚಾರಿಸಿದಾಗ 150 ಡೆಸ್ಕ್ ಗಳು ಬೇಕಾಗುತ್ತವೆ ಎಂದು ತಿಳಿಸಿದರು. ಕೂಡಲೇ ಕಾರ್ಯಪವೃತ್ತನಾಗಿ 100 ಡೆಸ್ಕ್ ಗಳನ್ನು ನೀಡಿದ್ದೇನೆ. ಇನ್ನುಳಿದ 50 ಡೆಸ್ಕ್ ಗಳನ್ನು ಒಂದು ವಾರದೊಳಗಾಗಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ಪ.ಪಂ ಅಧ್ಯಕ್ಷೆ ಜಯಸುಧಾ ಬಸವರಾಜ ಭೋವಿವಡ್ಡರ, ಉಪಾಧ್ಯಕ್ಷ ಶ್ರೀಕಾಂತ ಸಾನು, ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಎಲ್‌ಎಸ್‌ಎಂಪಿ ಮಾಜಿ ಅಧ್ಯಕ್ಷ ಉಮೇಶ ಬಿಜಾಪುರ, ದೇವು ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.