ಮುರುಘಾ ಶ್ರೀಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ

ಮುಂಡಗೋಡ: ಅಪ್ರಾಪ್ತೆ ಬಾಲಕಿಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಶರಣರ ತನಿಖೆಯಲ್ಲಿ ಪೊಲೀಸರು ವಿಳಂಬ ಮಾಡುತ್ತಿರುವ ಧೋರಣೆಯನ್ನ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗ ಮುರುಘಾ ಶ್ರೀಗಳು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಪೋಕ್ಸೋ ಕಾಯಿದೆಯಡಿ ದೂರು ದಾಖಲಾಗಿ ಒಂದು ವಾರ ಕಳೆದರು ಚಿತ್ರದುರ್ಗ ಪೊಲೀಸರು ಆರೋಪಿಯನ್ನು ಬಂಧಿಸಲು ವಿಳಂಬ ಮಾಡಿ ಆರೋಪಿ ಸ್ವಾಮೀಜಿಗೆ ಪೊಲೀಸರು ರಕ್ಷಣೆ ನೀಡಿ ಕಾಲ ಹರಣ ಮಾಡುತ್ತಿರುವುದನ್ನು ನಮ್ಮ ಸಮಿತಿಯ ಹಾಗೂ ಮಹಿಳಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಜೊತೆಗೆ ಕೂಡಲೆ ಸ್ವಾಮಿಜಿಯ ವಿಚಾರಣೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದಕ್ಕೂ ಮೊದಲು ಪ್ರತಿಭಟನಾಕಾರರು ಲೋಕೋಪಯೋಗಿ ಪರಿವೀಕ್ಷಣಾ ಮಂದಿರದಿಂದ ಪ್ರತಿಭಟನೆ ಆರಂಭಿಸಿ ತಹಶೀಲ್ದಾರ ಕಚೇರಿವರೆಗೆ ಘೋಷಣೆಯನ್ನು ಕೂಗುತ್ತಾ ಮನವಿ ಸಲ್ಲಿಸಿದರು.

ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಸ್ ಪಕ್ಕಿರಪ್ಪ ಮಾತನಾಡಿ, ಸ್ವಾಮೀಜಿಗಳು ತಮ್ಮ ಮೇಲೆ ಆಪಾದನೆ ಬಂದಾಗ ತಾವೇ ಶರಣಾಗಬೇಕು ಅದನ್ನು ಬಿಟ್ಟು ಅನಾಥ ಬಾಲಕಿಯರನ್ನು ಶಿಕ್ಷಣದ ಸೇವೆಯ ಸೋಗಿನಲ್ಲಿ ಇಟ್ಟುಕೊಂಡು ಪ್ರತಿದಿನ ಸರದಿಯಂತೆ ವಿದ್ಯಾರ್ಥಿನಿಯರಿಗೆ ಕರೆದು ಏಕಾಂತ ಸೇವೆಯ ನೆಪದಲ್ಲಿ ಅತ್ಯಾಚಾರ ಮಾಡಿದ್ದಾರೆಂದು ಅವರ ಮೇಲೆ ಆರೋಪ ಬಂದಿದೆ. ಅವರ ಮೇಲೆ ಈಗಾಗಲೇ ಪೋಕ್ಸೋ ಹಾಗೂ ಎಸ್ ಸಿ ಎಸ್ ಟಿ ದೌರ್ಜನ್ಯದ ಪ್ರಕರಣ ದಾಖಲಾಗಿದ್ದು, ಕಳೆದ ಒಂದು ವಾರದಿಂದ ಸ್ವಾಮೀಜಿ ಅವರನ್ನು ರಕ್ಷಣೆ ಮಾಡಲಾಗುತ್ತಿದೆ. ಇಡೀ ಕರ್ನಾಟಕದ ಸ್ವಾಮಿಗಳ ಮಾನ ಮರ್ಯಾದೆ ತೆಗೆದು ರಾಜೀ ಸಂಧಾನಕ್ಕೆ ಯತ್ನಿಸಿದರು ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಮುಖಂಡರಾದ ಬಸವರಾಜ್ ಹರಿಜನ, ಯಲ್ಲವ್ವ ಹರಿಜನ, ಗೋಪಾಲ ನಡಕಿನಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು