ಗಣೇಶೋತ್ಸವ ಪ್ರಯುಕ್ತ ಮುಂಡಗೋಡಿನ ವಿವಿಧೆಡೆ ವಿಶೇಷ ಪೂಜೆ ಸತ್ಯನಾರಾಯಣ ಕಥೆ: ನೂರಾರು ಸಂಖ್ಯೆಯಲ್ಲಿ ದೇವರ ದರ್ಶನ ಪಡೆದ ಭಕ್ತರು

ಮುಂಡಗೋಡ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮಂಟಪದಲ್ಲಿ ರವಿವಾರ ವಿಶೇಷ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ನಡೆಯಿತು. ಐದು ದಿನಗಳ ಕಾಲ ಗಣೇಶನಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಸತ್ಯನಾರಾಯಣ ಪೂಜೆ ನೆರವೇರಿಸಿ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು. ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕುಟುಂಬ ಸಮೇತರಾಗಿ ಠಾಣೆಗೆ ಬಂದು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮವಸ್ತ್ರವನ್ನು ಧರಿಸಿ ಪೂಜೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.

ಇನ್ನು ಗಣೇಶ ಚತುರ್ಥಿ ನಿಮಿತ್ತ ಪಟ್ಟಣದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಮಹಾರಂಗ ಪೂಜೆ ವಿಜೃಂಭಣೆಯಿಂದ ಜರುಗಿತು. ಗಣೇಶನ ದೇವಸ್ಥಾನದಲ್ಲಿ ವಿಶೇಷವಾಗಿ ಪೂಜೆ, ಹೋಮ, ಹವನ ಜರುಗಿದವು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಬಾರಿ ಬಾಳೆದಿಂಡಿನಿಂದ ಮಾಡಿದ ಮಂಟಪ ತುಂಬಾ ಆಕರ್ಷಕವಾಗಿತ್ತು. ಮಹಾ ಪೂಜೆ ಹಾಗೂ ಪ್ರಸಾದ ವಿತರಣೆ ಮಹಾ ರಂಗಪೂಜೆ
ದೈವಜ್ಞ ಸಮಾಜದ ಮಹಿಳಾ ಮಂಡಳ ತಂಡದಿಂದ ಚಂಡೆ ವಾದ್ಯ ಪ್ರದರ್ಶನ ಮಾಡಲಾಯಿತು.

ಪಟ್ಟಣದ ಗೆಳೆಯರ ಬಳಗವೆಂದೆ ಪ್ರಸಿದ್ದಿ ಪಡೆದಿರುವ ಯುವಕ ಮಂಡಳದಿಂದ ಪ್ರತಿಷ್ಠಾಪನೆ ಮಾಡಲಾದ ಲಂಭೊದರನಿಗೆ ರವಿವಾರ ವಿಶೇಷ ಪೂಜೆ ಹಾಗೂ ಸತ್ಯನಾರಾಯಣ ಪೂಜೆ ಜರುಗಿತು. ಪಟ್ಟಣದ ಬಸವೇಶ್ವರ ದೇವಸ್ಥಾನದ ಕಟ್ಟಡದಲ್ಲಿ ಪ್ರತಿಷ್ಠಾಪನೆ ಮಾಡಲಾದ ಗೆಳೆಯರ ಬಳಗದ ಲಂಬೊದರನಿಗೆ ವಿಶೇಷವಾಗಿ ಪೂಜೆ ಹೋಮ, ಹವನ ಹಾಗೂ ಸತ್ಯನಾರಾಯಣ ಪೂಜೆ ಜರುಗಿದವು. ಪೂಜಾ ಕಾರ್ಯಕ್ರಮದ ನಂತರ ಅನ್ನ ಸಂತರ್ಪಣೆ ಕಾಯ್ರಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.