ಹೇಡಿ ಕೊಲೆಗಾರರು ಹಿಂದೂ ಹುಲಿಗಳನ್ನ ಕೊಂದರೆ ಹಿಂದುತ್ವ ನಾಶ ಆಗಲ್ಲ – ಈಶ್ವರಪ್ಪ

ಶಿವಮೊಗ್ಗ: ಹರ್ಷನ ಕೊಲೆ ಕೇಸಿನ ಬಗ್ಗೆ ಎನ್ ಐಎ ವರದಿ ಗಮನಿಸಿದೆ. ಹೇಡಿ ಕೊಲೆಗಾರರು ಹಿಂದೂ ಹುಲಿಗಳನ್ನ ಕೊಂದರೆ ಹಿಂದುತ್ವ ನಾಶ ಆಗಲ್ಲ. ಇದೇ ಆಟ ಮುಂದುವರಿಸಿದರೆ ಅದಕ್ಕೆ ಸರಿಯಾದ ಬೆಲೆ ತೆರಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ. ಹರ್ಷ ಕೊಲೆ ಪ್ರಕರಣದ ಎನ್ ಐಎ ದೋಷಾರೋಪಣೆ ಪಟ್ಟಿ ಸಲ್ಲಿಕೆ ವಿಚಾರವಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಹಿಂದು ಸಮಾಜ‌ ಜಾಗೃತಿಯಾಗಿದೆ. ಹೇಡಿಗಳು ಅರ್ಥ ಮಾಡಿಕೊಳ್ಳಬೇಕು. ಹೇಡಿ ಕೊಲೆಗಾರರು ಹಿಂದು ಹುಲಿಗಳ ಕೊಂದರೆ ಹಿಂದುತ್ವ ನಾಶ ಮಾಡಲು ಸಾಧ್ಯವಿಲ್ಲ. ಸದ್ಯ ಶಿವಮೊಗ್ಗ ಶಾಂತವಾಗಿದೆ. ಇದೇ ಆಟ ಮುಂದುವರಿಸಿದರೆ ಅದಕ್ಕೆ ಸರಿಯಾದ ಬೆಲೆ ತೆರಬೇಕು ಎಂದು ಹೇಳಿದರು.