ಕುಮಟಾ: ನಾಪತ್ತೆಯಾಗಿರುವ ತನ್ನ ಗಂಡನನ್ನು ಹುಡುಕಿಕೊಡುವಂತೆ ಮಹಿಳೆಯೊಬ್ಬಳು ಇಲ್ಲಿನ ಪೋಲಿಸ್ ಠಾಣೆಗೆ ದೂರು ನೀಡಿದ್ದಾಳೆ. ತಾಲೂಕಿನ ಕಲಭಾಗ ನಿವಾಸಿ ಕಲ್ಪನಾ ಭಂಡಾರಿ ಎಂಬವಳು ನೀಡಿದ ದೂರಿನಲ್ಲಿ ತನ್ನ ಪತಿ ಕಮಲಾಕರ ಪುಡ್ಲಿಕ್ ಭಂಡಾರಿ (56) ಎಂಬವರು ಆ.29 ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗದ್ದೆಗೆ ಹೋಗಿ ಬೆಲಿ ಕಟ್ಟಿ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಮರಳಿ ಮನೆಗೆ ಬಂದಿಲ್ಲ. ನಾಪತ್ತೆಯಾಗಿರುವ ನನ್ನ ಪತಿಯನ್ನು ಹುಡುಕಿಕೊಡಿ ಎಂದು ಪೊಲೀಸರ ಬಳಿ ಕೋರಿಕೊಂಡಿದ್ದಾಳೆ. ಈ ಕುರಿತು ದೂರು ದಾಖಲಿಸಿಕೊಂಡಿರುವ ಪೋಲಿಸರು ವ್ಯಕ್ತಿಯ ಪೋಟೋ ಸಹಿತ ವಿವರದೊಂದಿಗೆ ಎಲ್ಲ ಠಾಣೆಗಳಿಗೆ ಮಾಹಿತಿ ರವನಿಸಿ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.