ಬೆಂಗಳೂರಿನಲ್ಲಿ ಪುನಿತ್ ಅಭಿಮಾನಿಗಳಿಂದ ‘ಅಪ್ಪು’ ಗಣೇಶೋತ್ಸವ.!

ಬೆಂಗಳೂರು: ಗೊರಗುಂಟೆಪಾಳ್ಯದಲ್ಲಿ ಅಪ್ಪು ಭಾವಚಿತ್ರದೊಂದಿಗೆ ಗಣೇಶೋತ್ಸವವನ್ನು ಆಚರಿಸಿದ್ದು ಬಹಳ ವಿಶೇಷವಾಗಿತ್ತು. ಅಪ್ಪು ಅಭಿನಯದ ಎಲ್ಲ ಚಲನಚಿತ್ರಗಳ ಬ್ಯಾನರ್ ಅಳವಡಿಸಿ ಸಂಭ್ರಮಿಸಿದರು. ಕ್ಲಾಸಿಕ್ ಫ್ರೆಂಡ್ಸ್ ಅಸೋಸಿಯೇಷನ್ ನಿಂದ ವಿಭಿನ್ನ ಗಣೇಶೋತ್ಸವ ಆಚರಿಸಲಾಯಿತು.

ಅಪ್ಪು ಚಿತ್ರದಿಂದ ಜೇಮ್ಸ್ ವರೆಗೆ ಎಲ್ಲ ಸಿನಿಮಾಗಳ ಪೋಸ್ಟರ್ ಅಳವಡಿಸಿ ಅಪ್ಪು ಅಭಿನಯದ ಚಿತ್ರ ಗೀತೆಗಳ ಪ್ರಸಾರ ಮಾಡಿ ಹಬ್ಬವನ್ನು ಆಚರಿಸಿದರು.

ಕನ್ನಡದ ಕೋಟ್ಯಾಧಿಪಟಿ ಟೈಟಲ್ ಮೂಲಕ ವಿಭಿನ್ನವಾದ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. ಗಣೇಶ ಮೂರ್ತಿ ಜೊತೆಗೆ ಅಪ್ಪು ಪ್ರತಿಮೆ ಇಟ್ಟು ಗಣೇಶ ಮೂರ್ತಿಗೆ ಅಪ್ಪು ಹಾಲಿನ ಅಭಿಷೇಕ ಮಾಡುತ್ತಿರುವ ರೀತಿ ಮೂರ್ತಿ ನಿರ್ಮಾಣ ಮಾಡಲಾಗಿದೆ.