ಸಿಲಿಕಾನ್ ಸಿಟಿಯಲ್ಲಿ ಹಬ್ಬದ ಸಂಭ್ರಮ ಬಲುಜೋರು.! ದೊಡ್ಡ ಗಣಪತಿ ದೇವಾಲಯದಲ್ಲಿ ಜನಸಾಗರ.!

ಇಂದು ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು ಸಿಲಿಕಾನ್ ಸಿಟಿಯಲ್ಲೂ ಹಬ್ಬದ ಸಂಭ್ರಮ ಜೋರಾಗಿದೆ.

ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಇಂದು ಸಾವಿರಾರು ಜನ ಭಕ್ತಾದಿಗಳು ಸೇರಿದ್ದರು. ಕಿಲೋ ಮೀಟರ್ ಗಟ್ಟಲೆ ಕ್ಯೂ ನಿಂತು ಭಕ್ತಾದಿಗಳು ಗಣೇಶನ ದರ್ಶನ ಪಡೆದರು.

ನೂಕು ನುಗ್ಗಲು ಉಂಟಾದರೂ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಜನರನ್ನು ನಿಭಾಯಿಸುವುದಕ್ಕೆ ದೇವಸ್ಥಾನದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯ್ತು. ಎರಡು ವರ್ಷದ ಬಳಿಕ ಅದ್ದೂರಿಯಾಗಿ ನಡೆಯುತ್ತಿರುವ ಗಣೇಶನ ಹಬ್ಬವಾದ್ದರಿಂದ ಭಕ್ತರ ದಂಡೇ ಹರಿದು ಬಂದಿತ್ತು.