ಚಿಕ್ಕಬಳ್ಳಾಪುರ: ಭಾರೀ ವರ್ಷಧಾರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಕೆರೆ 20 ವರ್ಷಗಳ ನಂತರ ಮೈದುಂಬಿ ಕೋಡಿ ಹರಿಯುತ್ತಿದೆ. ಆದ್ರೆ ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದ್ದು ನೂರಾರು ಎಕರೆ ಜಮೀನು ಜಲಾವೃತವಾಗಿದೆ.
ದ್ರಾಕ್ಷಿ ತೋಟ, ರಾಗಿ ಬೆಳೆ, ಟೊಮೆಟೊ, ಮೆಕ್ಕೆಜೋಳ ಸೇರಿ ಹಲವು ಬೆಳೆಗಳು ಸಂಪೂರ್ಣ ಜಲಾವೃತವಾಗಿದ್ದು ಈ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗ್ರಾಮಸ್ಥರಿಗೆ 20 ವರ್ಷಗಳ ನಂತರ ಕೆರೆ ಕೋಡಿ ಹರಿದ ಖುಷಿ ಒಂದಡೆಯಾದ್ರೆ ಬೆಳೆ ಹಾನಿಯಾಗಿರೋದು ನೋವು ತಂದಿದೆ.