ಗೋಪಿ ಜಾಲಿ ಕ್ಲಿಕ್ಕಿಸಿದ ಚಿತ್ರಕ್ಕೆ ಕೇಂದ್ರ ಸಂಸ್ಕೃತಿ ಇಲಾಖೆಯ ಪ್ರಶಂಸಾ ಪತ್ರ.!

ಕುಮಟಾ: ಖ್ಯಾತ ಯುವ ಛಾಯಾಗ್ರಾಹಕ ಕುಮಟಾದ ಗೋಪಿ ಜಾಲಿ ಸೆರೆಹಿಡಿದ ಚಿತ್ರಕ್ಕೆ ಲಲಿತ ಕಲಾ ಅಕಾಡೆಮಿ ಕೇಂದ್ರ ಸಂಸ್ಕೃತಿ ಇಲಾಖೆಯಿಂದ ಪ್ರಶಂಸಾ ಪತ್ರವನ್ನು ಸೋಮವಾರ ನವದೆಹಲಿಯಲ್ಲಿ ನೀಡಿ ಗೌರವಿಸಲಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ವಿಶ್ವ ಛಾಯಾಗ್ರಾಹಣ ದಿನಾಚರಣೆ ದಿನ ಕೇಂದ್ರ ಲಲಿತ ಕಲಾ ಅಕಾಡೆಮಿಯಲ್ಲಿ ಇವರ ಚಿತ್ರಗಳು ಪ್ರದರ್ಶಿಸಲ್ಪಟ್ಟಿದ್ದವು. ದೇಶಾದ್ಯಂತ ಒಟ್ಟೂ 1603 ಚಿತ್ರಗಳು ಆಯ್ಕೆಯಾಗಿದ್ದು, ಅದರಲ್ಲಿ 135 ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೇಂದ್ರ ಲಲಿತ ಕಲಾ ಅಕಾಡೆಮಿಯು ಅವುಗಳಲ್ಲಿ 5 ಚಿತ್ರಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದು, ಅದರಲ್ಲಿ ಗೋಪಿ ಜಾಲಿ ಅವರು ಸೆರೆ ಹಿಡಿದ ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆಯ ಮೇಲೆ ಹಾರಾಡುತ್ತಿರುವ ತ್ರಿವರ್ಣ ಧ್ವಜದ ಚಿತ್ರವೂ ಒಂದು.

ಜಿಲ್ಲೆಯ ಹಲವು ಪ್ರವಾಸಿ ತಾಣಗಳು, ಸುಂದರ ಪರಿಸರ ಛಾಯಾ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ವಿಶೇಷ ಪರಿಣಿತಿ ಪಡೆದು ಹೆಸರುಗಳಿಸಿದ್ದ ಗೋಪಿ ಜಾಲಿ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರ ಕೊಡ ಮಾಡುವ ಪ್ರಶಸ್ತಿ ದೊರಕಿದ್ದು, ಛಾಯಾ ಚಿತ್ರ ಪ್ರಿಯರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.