ಹೊನ್ನಾವರ: ಚಿಕ್ಕನಕೋಡ್ ವಿ.ಎಸ್.ಎಸ್ ಗ್ರಾಹಕರು ಯಾವುದೇ ಆತಂಕ ಪಡುವುದು ಬೇಡ ಗ್ರಾಹಕರ ಸ್ವತ್ತು ಸುರಕ್ಷಿತವಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಆರ್ ಪಿ ನಾಯ್ಕ ಹೇಳಿದರು.
ಸಂಘದ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಸಂಘದ ಸ್ವತ್ತು ಕಳ್ಳರ ಪಾಲಾಗುವುದು ಸಾರ್ವಜನಿಕರ ಸಮಯ ಪ್ರಜ್ಞೆ, ಬದ್ಧತೆಯಿಂದ ಸಂಘಕ್ಕೆ ಆಗುವ ದೊಡ್ಡ ಹಾನಿ ತಪ್ಪಿದೆ . ಸಂಘದ ಗ್ರಾಹಕರು ಈ ಕುರಿತು ಆತಂಕ ಆತಂಕ ಪಡುವುದು ಬೇಡ. ಸಂಘಕ್ಕೆ ಸಿಸಿ ಕ್ಯಾಮರಾ, ಸುಸಜ್ಜಿತವಾದ ಸ್ಟ್ರಾಂಗ್ ರೂಮ್ ಇದೆ. ಇನ್ನು ಹೆಚ್ಚಿನ ಭದ್ರತೆಗಾಗಿ ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಗಣಪತಿ ಅವಧಾನಿ, ನಿರ್ದೇಶಕರಾದ ಶ್ರೀಕಾಂತ ನಾಯ್ಕ, ನಾಗೇಶ ನಾಯ್ಕ, ಕೃಷ್ಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.