ಕಾರವಾರ: ತಮಿಳುನಾಡಿನಲ್ಲಿ ನಾಪತ್ತೆಯಾಗಿದ್ದ ಮಹಿಳೆ ಕಾರವಾರದಲ್ಲಿ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಾಳೆ. ಕಳೆದ 6 ತಿಂಗಳಿಂದ ಮಹಿಳೆ ಹಾಗೂ ಪ್ರಿಯಕರ ನಗರದ ತಾಮ್ಸೆವಾಡದಲ್ಲಿ ವಾಸವಾಗಿದ್ದರು.
ಎರಡು ಮಕ್ಕಳನ್ನು ಹೊಂದಿದ್ದ ಮಹಿಳೆ ಫೆ. 21 ರಂದು ನಾಪತ್ತೆಯಾಗಿದ್ದಳು. ಈ ಕುರಿತು ಕುಟುಂಬಸ್ಥರು ತಮಿಳುನಾಡಿನಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ತಮಿಳುನಾಡು ಪೊಲೀಸರು ಮೊಬೈಲ್ ಟ್ರ್ಯಾಕಿಂಗ್ ಹಾಗೂ ಕಾರವಾರ ಪೊಲೀಸರ ನೆರವಿನೊಂದಿಗೆ ಯುವತಿಯನ್ನು ಪತ್ತೆ ಮಾಡಿದ್ದಾರೆ.
ದೂರದ ಸಂಬಂಧಿ ಯುವಕನೊಂದಿಗೆ ಓಡಿ ಬಂದು ಸಂಸಾರ ನಡೆಸುತ್ತಿದ್ದ ಇಬ್ಬರನ್ನೂ ತಮಿಳುನಾಡಿನ ಪಿಎಸ್‌ಐ ವೀರಮುತ್ತು ಟೀಂ ಕರೆದೊಯ್ದಿದೆ. ಇನ್ನೂ ಎರಡು ತಿಂಗಳ ಹಿಂದೆ ಹುಡುಕಿಕೊಂಡು ಬಂದಿದ್ದರೂ ಪತ್ತೆಯಾಗಿರಲಿಲ್ಲ. ಕೊನೆಗೂ ಯುವಕ, ವಿವಾಹಿತೆಯನ್ನ ಪತ್ತೆಮಾಡಿ ಪೊಲೀಸರು ತಮಿಳುನಾಡಿಗೆ ಕರೆದೊಯ್ದಿದ್ದಾರೆ.