ಕಾರವಾರ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಯಿತು.
ಸಭೆಯಲ್ಲಿ ಕಾಲೇಜಿನ ಪ್ರಾಚಾರ್ಯರು ಕಾಲೇಜಿನ ಅಭಿವೃದ್ಧಿ ಕಾರ್ಯದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಈಗಾಗಲೇ ಕಾಲೇಜಿನ ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿ ಇದೆ. ಇನ್ನೂ ಕಾಲೇಜಿನಲ್ಲಿ ಸಭಾಭವನ ಅವಶ್ಯಕತೆ ಇರುವ ಬಗ್ಗೆ ಸಭೆಯಲ್ಲಿ ತಿಳಿಸಿದರು.
ಬಳಿಕ ಮಾತನಾಡಿದ ವಿ.ಪ ಸದಸ್ಯ ಗಣಪತಿ ಉಳ್ವೇಕರ್ ಈ ಕಾಲೇಜು ಅತ್ಯಂತ ಪ್ರಚಲಿತ ಕಾಲೇಜಾಗಿದೆ. ಕಾಲೇಜಿನ ಹಿಂದಿನ ಆಡಳಿತ ಮಂಡಳಿ ಮನಸೋ ಇಚ್ಛೆ ಕೆಲಸ ಮಾಡಿ ರೂಪುರೇಷೆ ಇಲ್ಲದೆ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಮೊದಲೇ ಸರಿಯಾಗಿ ಕಟ್ಟಡದ ನೀಲನಕ್ಷೆ ಮಾಡಿದ್ದರೆ ವಿದ್ಯಾರ್ಥಿಗಳ ಸೈಕಲ್ ಸ್ಟ್ಯಾಂಡ್ ಅನ್ನು ಕಟ್ಟಡ ಕೆಳ ಭಾಗದಲ್ಲಿ ಮಾಡಬಹುದಿತ್ತು. ಮೊದಲೇ ಕಾಲೇಜಿನಲ್ಲಿ ಜಾಗದ ಸಮಸ್ಯೆ ಇದೆ. ಈಗಾಗಲೇ ಕಾಲೇಜಿಗೆ ಸಭಾಭವನದ ಅವಶ್ಯಕತೆ ಇರುವ ಬಗ್ಗೆ ತಿಳಿಸಿದ್ದು, ಅನುದಾನದಲ್ಲಿ ಸಭಾಭವನ ನಿರ್ಮಾಣಕ್ಕೆ ಹಣ ನೀಡುತ್ತೇನೆ. ಇನ್ನು ಕಾಲೇಜಿನಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಇನ್ನು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯ ಬಗ್ಗೆ ವಿಷಯ ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಮಟ್ಟದಲ್ಲಿ ಚರ್ಚೆ ನಡೆಸುತ್ತೇನೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರಿನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ, ಅಭಿವೃದ್ಧಿ ಸಮಿಯ ಸದಸ್ಯರಾದ ಜಗದೀಶ ಬೀರಕೋಡಿಕರ್, ಮಾಲಾ ಹುಲಸ್ವಾರ, ಮೆಘನಾ, ಮಾಜಿ ಶಾಸಕ ಗಂಗಾಧರ ಭಟ್ಟ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.