ಚಿಕ್ಕನಕೋಡ ವಿ.ಎಸ್.ಎಸ್ ಸಂಘದ ಕಛೇರಿ ದರೋಡೆ ಯತ್ನ: ಓರ್ವನ ಬಂಧನ

ಹೊನ್ನಾವರ: ತಾಲೂಕಿನ ಚಿಕ್ಕನಕೋಡ ವ್ಯವಸಾಯ ಸೇವಾ ಸಹಕಾರಿ ಸಂಘದ ಕಛೇರಿಗೆ ದರೋಡೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ರಾತ್ರಿ ಈರ್ವರು ಸೇರಿ ದರೋಡೆ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಶೆಟರ್ ಶಬ್ದಕ್ಕೆ ಕಛೇರಿಯ ಅಕ್ಕಪಕ್ಕದ ಸ್ಥಳೀಯರು ಎಚ್ಚರವಾಗಿದ್ದಾರೆ. ಜನರನ್ನು ಕಂಡು ಪರಾರಿಯಾಗಲು ಯತ್ನಿಸಿದ ಕಳ್ಳರು. 20 ಪುಟ್ ಎತ್ತರದಿಂದ ಜಿಗಿದು ಓರ್ವ ಕಳ್ಳ ಪರಾರಿಯಾಗಿದ್ದು, ಮತ್ತೋರ್ವನ ಬಂಧನವಾಗಿದೆ. ಬಂಧಿತ ಓರ್ವ ಅಂಕೋಲಾ ಬೊಬ್ರುವಾಡದ ಪ್ರಶಾಂತ ನಾಯ್ಕ ಎಂದು ಗುರುತಿಸಲಾಗಿದೆ. ತಪ್ಪಿಸಿಕೊಂಡ ಇನ್ನೊರ್ವ ಯಲ್ಲಾಪುರದ ಪ್ರಸನ್ನ ಎಂದು ತಿಳಿದು ಬಂದಿದೆ. ಈರ್ವರೂ ಸೊಸೈಟಿ ಕಳ್ಳತನಕ್ಕೆ ಯತ್ನ ಮಾಡಿದ್ದರು ಎನ್ನಲಾಗಿದೆ.