ಆ. 29 ರಂದು ಕಾರವಾರದಲ್ಲಿ ಕರೆಂಟ್ ಕಟ್.! ಯಾವೆಲ್ಲಾ ಭಾಗಗಳಲ್ಲಿ ವಿದ್ಯುತ್ ಇರಲ್ಲ.?

ಕಾರವಾರ: ಕಾರವಾರದ ಶೇಜವಾಡ 110 ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ನಿರ್ವಹಣಾ ಕೆಲಸ ಕೈಗೊಂಡಿರುವುದರಿಂದ ಆ.29 ಸೋಮವಾರದಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆ.ಎಚ್.ಬಿ. ರೋಡ್, ತೇಲಂಗ ರೋಡ್, ನಂದನಗದ್ದಾ, ಸುರಕೇರಿ, ಶಿರವಾಡ, ಇಂಡಸ್ಟ್ರಿಯಲ್ ಫೀಡರ್‌ಗಳ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಈ ಸಂದರ್ಭದಲ್ಲಿಗ್ರಾಹಕರು ಸಹಕರಿಸಬೇಕೆಂದು ಕಾರವಾರದ ಶೇಜವಾಡ 110 ಕೆ.ವಿ ವಿದ್ಯುತ್ ಉಪಕೇಂದ್ರ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್, ನೋಡಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.