ಸ್ವರಾಂಶಾ ಕ್ರಿಯೇಷನ್ಸ್ ಅರ್ಪಿಸುವ ‘ಮುದ್ದು ಗಣಪತಿ’ ಭಕ್ತಿಗೀತೆ ಬಿಡುಗಡೆ

ಕುಮಟಾ: ಸ್ವರಾಂಶಾ ಕ್ರಿಯೇಷನ್ಸ್ ಅರ್ಪಿಸುವ ‘ಮುದ್ದು ಗಣಪತಿ’ ಭಕ್ತಿಗೀತೆಯು ತಾಲೂಕಿನ ಕೊಡ್ಕಣಿಯ ಶ್ರೀ ವಿಶ್ವಂಭರ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಇಂದು ಬಿಡುಗಡೆಗೊಂಡಿತು. ಖ್ಯಾತ ಗಾಯಕ ಮಹೇಶ ಆಚಾರ್ಯ ಇವರ ಸಂಗೀತ ಮತ್ತು ಗಾಯನದ, ನವೀನ ಆಚಾರ್ಯ ಇವರ ಸಾಹಿತ್ಯದ, ಮೆಲ್ವಿನ್ ಲೀಮಾ ಇವರು ಸಂಗೀತ ಸಂಯೋಜನೆಯ, ಶಾಂತಿ ಮಹೇಶ ನಿರ್ಮಾಣದ ಗೀತೆ ಇದಾಗಿದ್ದು, ‘ಮಹೇಶ್ ಆಚಾರ್ಯ’ YouTube ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ.

ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರು ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ನಿರೂಪಕ ಆಂಕರ್ ಯೋಗೇಶ್ ಮಿರ್ಜಾನ್ ಹಾಜರಿದ್ದರು. ಎಲ್ಲರೂ ಈ ಭಕ್ತಿಗೀತೆಯನ್ನು ಶೇರ್ ಮಾಡಿ ಮತ್ತು ಚಾನೆಲ್ SUBSCRIBE ಮಾಡಿ ಎಂದು ಮಹೇಶ ಆಚಾರ್ಯ ಕೇಳಿಕೊಂಡಿದ್ದಾರೆ.