ನವೋದಯ ಶಾಲೆಗೆ ಭೇಟಿ ನೀಡಿ ಕುಂದು ಕೊರತೆ ಆಲಿಸಿದ ಶಾಂತಾರಾಮ ಸಿದ್ಧಿ

ಮುಂಡಗೋಡ: ತಾಲೂಕಿನ ಮಳಗಿಯ ನವೋದಯ ಶಾಲೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಭೇಟಿ ನೀಡಿ ಶಾಲೆಯ ಕುಂದು ಕೊರತೆಯನ್ನು ಆಲಿಸಿದರು. ಬಳಿಕ ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಮಾಹಿತಿ ಪಡೆದರು.

ವಸತಿ ನಿಲಯದ ಕಟ್ಟಡ ಹಳೆಯದಾಗಿದ್ದು ಮಳೆಗಾಲದಲ್ಲಿ ಸೋರುತ್ತದೆ. ಹೀಗಾಗಿ ಕಟ್ಟಡದ ಮೇಲೆ ತಗಡಿನ ಶೆಡ್ ನಿರ್ಮಿಸಬೇಕು. ಜೊತೆಗೆ ಚರಂಡಿ, ರಸ್ತೆ ಹಾಳಾಗಿದ್ದು ನಿಮ್ಮ ಅನುದಾನದಲ್ಲಿಯಾದರು ಹಾಕಿಕೊಡಿ ಎಂದು ಪಿ.ಟಿ.ಸಿ ಆದ್ಯಕ್ಷ ಪ್ರಕಾಶ ಅಜ್ಮಮ್ಮನವರ ಮನವಿ ಮಾಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಶಾಂತಾರಾಮ ಸಿದ್ಧಿ ಭರವಸೆ ನೀಡಿದರು.