ಮುಂಡಗೋಡ: ಗಣೇಶ ಮೂರ್ತಿ ವಿಸರ್ಜಣೆ ಮಾಡುವ ಬಸವೇಶ್ವರ ದೇವಸ್ಥಾನ ನೀರಿನ ಹೊಂಡವನ್ನು ಗುರುವಾರ ಪಟ್ಟಣ ಪಂಚಾಯಿತಿಯವರು ಸ್ವಚ್ಛತೆ ಮಾಡಿದರು. ಪಟ್ಟಣದ ಬಸವನ ಬೀದಿಯ ಬಸವೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಬೃಹತ್ ನೀರಿನ ಹೊಂಡವಿದ್ದು ಸುತ್ತಲು ಗಿಡ ಗಂಟಿಗಳು ಬೆಳೆದಿದ್ದವು. ಹಾಗೂ ನೀರಿನ ಹೊಂಡವು ತ್ಯಾಜ್ಯಗಳಿಂದ ತುಂಬಿತ್ತು.
ಹೊಂಡವನ್ನು ಸ್ವಚ್ಛತೆಗೋಳಿಸುವಂತೆ ಈ ಹಿಂದೆಯೇ ಸಾರ್ವಜನಿಕರು ಪಟ್ಟಣ ಪಂಚಾಯಿತಿಯವರಿಗೆ ತಿಳಿಸಿದ್ದರು. ಗುರುವಾರ ಪಟ್ಟಣ ಪಂಚಾಯಿತಿಯವರು ಈ ನೀರಿನ ಹೊಂಡವನ್ನು ಸ್ವಚ್ಛಗೊಳಿಸಿದರು.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುವ ಸಾರ್ವಜನಿಕ ಗಣಪತಿಗಳು ಹಾಗೂ ಮನೆಗಳಲ್ಲಿನ ಗಣಪತಿಗಳನ್ನು ಇದೇ ಹೊಂಡದಲ್ಲಿ ಪ್ರತಿವರ್ಷ ವಿಸರ್ಜನೆ ಮಾಡಲಾಗುತ್ತದೆ.



