ಮುಂಡಗೋಡ: ರಸ್ತೆಯ ಮೇಲೆ ಬಿದ್ದಿದ್ದ ಮೂಬೈಲನ್ನು ಆಟೋ ಚಾಲಕನೊಬ್ಬ ಮಾಲಿಕರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ತಾಲೂಕಿನ ಇಂದೂರ ಗ್ರಾಮದ ಸೈಯದ ನೆಗಳೂರ ಎಂಬ ಆಟೋ ಚಾಲಕನೇ ಮೂಬೈಲ್‌ನ್ನು ಮಾಲಿಕರಿಗೆ ತಲುಪಿಸಿದ ವ್ಯಕ್ತಿ.
ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಲ್ಲಮ್ಮ ನೀರಲಗಿ ಎಂಬವರು ಮುಂಡಗೋಡನಿಂದ ಮೈನಳ್ಳಿಗೆ ಹೋಗುವಾಗ ಟಿಬೇಟಿಯನ್ ಕ್ಯಾಂಪ್ ಬಳಿ ಅವರ ಮೂಬೈಲ್ ಬಿದ್ದಿದೆ. ನಂತರ ಮನೆಗೆ ಹೋಗಿ ನೋಡಿದಾಗ ಮೂಬೈಲ್ ಇಲ್ಲದಿರುವುದು ಕಂಡು ಬೇರೆ ನಂಬರ್ ನಿಂದ ಕರೆ ಮಾಡಿದಾಗ ಆಟೋ ಚಾಲಕ ಸೈಯದ ತನಗೆ ನಿಮ್ಮ ಪೋನ್ ಸಿಕ್ಕಿದೆ ಎಂದು ಹೇಳಿ ಗುರುವಾರ ಬೆಳಗ್ಗೆ ಮೂಬೈಲ್‌ನ್ನು ಮರಳಿಸುತ್ತೇನೆ ಎಂದಿದ್ದಾನೆ. ಮಾತಿಗೆ ತಪ್ಪದ ಸೈಯದ ನೆಗಳೂರ ಮೊಬೈಲ್ ವಾಪಸ್ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಆಟೋ ಚಾಲಕನ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.



