ಶಿರಸಿ: ಫ್ರಾನ್ಸಿನ ನಾರ್ಮಂಡಿಯಲ್ಲಿ ನಡೆದ 1 9ನೇ ಅಂತರರಾಷ್ಟ್ರೀಯ ಸ್ಕೂಲ್ ಫೆಡರೇಶನ್ ಕ್ರೀಡೆಗಳಲ್ಲಿ ಶಿರಸಿ ಯ 16 ವರ್ಷದ ಪ್ರೇರಣಾ ನಂದಕುಮಾರ್ ಶೇಠ್ ಚಿನ್ನದ ಪದಕ ಗೆದ್ದಿದ್ದಾರೆ.
ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಸ್ವರ್ಣ ಪದಕಗಳನ್ನು ಗೆಲ್ಲುವ ಮೂಲಕ ಪ್ರೇರಣಾ ರಾಜ್ಯ ಮತ್ತು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ರಾಷ್ಟ್ರೀಯ ಹಾಗೂ ದೇಶದ ವಿವಿಧೆಡೆ ಆಯೋಜಿಸಿರುವ ಇತರ ಟೂರ್ನಿಗಳಲ್ಲಿ 31 ಕ್ಕಿಂತ ಹೆಚ್ಚು ಪದಕ ಜಯಿಸಿದ್ದಾರೆ.
ತನ್ನ 5 ನೇ ವರ್ಷದಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿದ ಪ್ರೇರಣಾ ಸದ್ಯ 19 ರ ವಯೋಮಿತಿಯ ಸಿಂಗಲ್ಸ್ ವಿಭಾಗದಲ್ಲಿ ಐದನೇ ರ‍್ಯಾಂಕಿಂಗ್ ಹೊಂದಿದ್ದಾರೆ. ಶಿರಸಿ ಲಯನ್ಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್‍ನ ವಿದ್ಯಾರ್ಥಿನಿಯಾಗಿರುವ ಪ್ರೇರಣ, ಬ್ಯಾಡ್ಮಿಂಟನ್ ಕಾರಣದಿಂದ ಓದಿನಲ್ಲಿ ಹಿಂದುಳಿಯಬಾರದು ಎಂಬ ಕಾರಣಕ್ಕೆ ಬೈಜೂಸ್‍ನಲ್ಲಿ ವಿಶೇಷ ಕೋಚಿಂಗ್ ಪಡೆಯುತ್ತಿದ್ದರು. ಇತ್ತೀಚೆಗೆ ಪ್ರಕಟವಾದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಅವರು ಶೇಕಡ 85 ಅಂಕ ಪಡೆದಿದ್ದಾರೆ.