ಅಂಕೋಲಾ: ಅಕ್ರಮವಾಗಿ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಅಂಕೋಲಾ ಪೊಲೀಸರು ದಾಳಿ ನಡೆಸಿ 9 ಆರೋಪಿಗಳನ್ನು ಬಂಧಿಸಿ, 10 ಜಾನವಾರುಗಳನ್ನು ರಕ್ಷಿಸಿದ ಘಟನೆ ತಾಲೂಕಿನ ಕೋಡ್ಸಣಿಯಲ್ಲಿ ಬುಧವಾರ ಮದ್ಯಾಹ್ನ ನಡೆದಿದೆ.
ಅಂಕೋಲಾದ ಶಿರಗುಂಜಿಯ ಸಂದೀಪ ಈಶ್ವರ ನಾಯಕ, ಭಟ್ಕಳ ತಾಲೂಕಿನ ಮಾವಿನ ಕುರ್ವೆಯ ಡೊಂಗ್ರರ ಹಳ್ಳಿಯ ನಿವಾಸಿಗಳಾದ ಅಬ್ದುಲ್ ಮುತಾಲಿಪ ಖಾದಿರ ಭಾಷಾ, ಮಹಮ್ಮದ ಸಾದಿಕ್ ಖಾದಿರ ಭಾಷಾ, ಪೈಜ್ ಅಹಮ್ಮದ ಮಹಮ್ಮದ ಮಜಾರ, ಭಟ್ಕಳದ ಮುಗದುಮ ಕಾಲನಿಯ ಅಲಿ ಇಸ್ಮಾಯಿಲ ಸಿಪಾಯಿ ಸುಕ್ರಿ ಬಾಷಾ, ಭಟ್ಕಳದ ನವಾಯತ ಕಾಲನಿಯ ಮಹಮ್ಮದ ವಾಸಿಂ ಖಾಸಿಂ ಮಸ್ತಾಕ, ಕಾರವಾರದ ಸಣ್ಣ ಮಸೀದಿ ಹತ್ತಿರದ ಮೋಸಿನ್ ಮಕಬಲ ಮಕಾಂದರ, ಕಾರವಾರದ ಕೋಡಿಬಾಗದ ಆಸ್ಪಕ ಉಸ್ಮಾನ ಕಾಚೆವಾಡಿ ಬಂಧಿತ ಆರೋಪಿಗಳು. ಕಣಗಿಲದ ಪ್ರಶಾಂತ ದೇವಿದಾಸ ನಾಯಕ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಯ ವಿವರ
ಅಂಕೋಲಾ ತಾಲೂಕಿನ ವಾಸರಕುದ್ರಗೆಯಿಂದ ಅಕ್ರಮವಾಗಿ ಮಿನಿ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಜಾನವಾರುಗಳನ್ನು ಭಟ್ಕಳದ ಕಸಾಯಿ ಖಾನೆಗೆ ಸಾಗಿಸುತ್ತಿರುವಾಗ ಅಂಕೋಲಾ ಪೊಲೀಸರು ದಾಳಿ ನಡೆಸಿದ್ದರು. ಜಾನವಾರುಗಳನ್ನು ತುಂಬಿ ಸಾಗಿಸುತ್ತಿದ್ದ ಲಾರಿ ಮುಂದೆ ಗಸ್ತು ವಾಹನವಾಗಿ ಸಂಚರಿಸುತ್ತಿದ್ದ ಒಂದು ಬೈಕ್ ಹಾಗೂ ಇನೋವಾ ಕಾರನ್ನು ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ.
ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ ಪಿಎಸೈಗಳಾದ ಪ್ರವೀಣಕುಮಾರ, ಮಹಾಂತೇಶ ವಾಲ್ಮೀಕ ನೇತ್ರತ್ವದಲ್ಲಿ ಪ್ರೊಬೆಷನರಿ ಪಿಎಸೈ ಸುನೀಲ ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಪುನೀತ ನಾಯ್ಕ, ಸುರೇಶ ಬೆಳ್ಳೊಳ್ಳಿ, ವಿಜಯ ಹರಪನಹಳ್ಳಿ, ನಾಗರಾಜ್ ಹೊತನಹಳ್ಳಿ, ಗುರು ನಾಯ್ಕ, ಮನೋಜ ಡಿ, ಜಗಧೀಶ ನಾಯ್ಕ, ಓಮು ನಾಯ್ಕ, ನಂದನ ಶೆಟ್ಟಿ, ಸಾಜು ಪಾಟೀಲ, ಮಂಜುನಾಥ ಗಡಗಿ ಕಾರ್ಯಾಚರಣೆಯಲ್ಲಿದ್ದರು.
ಆರೋಪಿಗಳಿಂದ ರಕ್ಷಿಸಿ ತಂದ ಜಾನುವಾರುಗಳನ್ನು ಇಲ್ಲಿಯ ಪೊಲೀಸ್ ವಸತಿಗೃಹದ ಆವಾರದಲ್ಲಿ ಜಾನುವಾರುಗಳನ್ನು ಇಡಲಾಗಿದ್ದು ಅವುಗಳಿಗೆ ರಾಷ್ಟ್ರೀಯ ಬಜರಂಗದಳದ ಕಾರ್ಯಕರ್ತರು ಮೇವು ನೀಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಹಿಂಸಾತ್ಮಕ ರೀತಿಯಲ್ಲಿ ಜಾನುವಾರಗಳನ್ನು ಸಾಗಿಸುತ್ತಿದ್ದರಿಂದ ಕೆಲವೊಂದು ದನಗಳಿಗೆ ಗಾಯವಾಗಿತ್ತು. ಇದನ್ನು ರಾಷ್ಟ್ರೀಯ ಭಜರಂಗದಳದ ಸಂಚಾಲಕ ಕಿರಣ ಹಾಗೂ ಇತರರು ಉಪಚರಿಸಿದರು.