ಮಣಿಪಾಲ್ ಆರೋಗ್ಯಕಾರ್ಡ್ ಪಡೆಯಲು ಅಕ್ಟೋಬರ್ 30 ರವರೆಗೆ ಅವಕಾಶ

ಸಿದ್ದಾಪುರ: ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ ಎಂಬ ಧ್ಯೇಯದೊಂದಿಗೆ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ನೀಡಲಾಗುವ ಮಣಿಪಾಲ್ ಆರೋಗ್ಯಕಾರ್ಡ್ ಪಡೆಯಲು ಅಕ್ಟೋಬರ್ 30 ರವರೆಗೆ ಅವಕಾಶವಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳುವಂತೆ ಆಸ್ಪತ್ರೆಯ ವ್ಯವಸ್ಥಾಪಕ ಮೋಹನ್ ಶೆಟ್ಟಿ ಕರೆ ನೀಡಿದ್ದಾರೆ.

ಸಿದ್ದಾಪುರದ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಶಾಖೆಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಸಾಮಾಜಿಕ ಬದ್ದತೆಯಾಗಿ ಆರಂಭಿಸಿದ ಮಣಿಪಾಲ್ ಆರೋಗ್ಯ ಕಾರ್ಡ್ ಮೂಲಕ ನೇರವಾಗಿ ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ಆಸ್ಪತ್ರೆಯ ಎಲ್ಲಾ ಆರೋಗ್ಯ ಸೇವೆಯ ಮೇಲೆ ರಿಯಾಯಿತಿ ನೀಡುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 50 ಸಾವಿರ ಜನ ಕಾರ್ಡ್ ನೊಂದಣಿ ಮಾಡಿಸಿದ್ದು, 60 % ಹೊರ ರೋಗಿ ಹಾಗೂ 35 % ಒಳರೋಗಿ ವಿಭಾಗದಲ್ಲಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಒಂದು ವರ್ಷದ ಯೋಜನೆಯಲ್ಲಿ ಕಾರ್ಡಿನ ಸದಸ್ಯತ್ವವು ಒಬ್ಬರಿಗೆ 300 ರೂ ಕೌಟುಂಬಿಕ ಕಾರ್ಡ್ ಅಂದರೆ ಕಾರ್ಡುದಾರ, ಅವರ ಸಂಗಾತಿ, 25 ವರ್ಷದೊಳಗಿನ ಮಕ್ಕಳಿಗೆ 600 ರೂ ಮತ್ತು ಕುಟುಂಬ ಪ್ಲಸ್ ಯೋಜನೆಗೆ ಕಾರ್ಡುದಾರ, ಅವನ ಪತ್ನಿ, 25 ವರ್ಷದೊಳಗಿನ ಮಕ್ಕಳು ಮತ್ತು ನಾಲ್ಕು ಪೋಷಕರಿಗೆ 750 ಹಾಗೂ ಎರಡು ವರ್ಷದ ಯೋಜನೆಯಲ್ಲಿ ಒಬ್ಬರಿಗೆ 500 ಹಾಗೂ ಕುಟುಂಬಕ್ಕೆ 800 ಮತ್ತು ಕುಟುಂಬ ಪ್ಲಸ್ ಯೋಜನೆಗೆ 950 ರು ಪಾವತಿಸಬೇಕು. ಈ ಕಾರ್ಡನ್ನು ಪ್ರಸಕ್ತ ಸಾಲಿನಲ್ಲಿ ಅಕ್ಟೋಬರ 30 ರವರೆಗೆ ನೀಡಲಿದ್ದು, ಗ್ರಾಹಕರು ಕಾರ್ಡ್ ಪಡೆದು ರಿಯಾಯಿತಿ ಸೌಲಭ್ಯ ಪಡೆದುಕೊಳ್ಳುವಂತೆ ಕೋರಿದರು.

ಈ ಸಂದರ್ಭದಲ್ಲಿ ಮಾರುಕಟ್ಟೆ ವಿಭಾಗದ ಚೇತನ್, ಅನಿಲ್ ನಾಯಕ್ ಹಾಗೂ ಸೌಹಾರ್ದದ ಸಹಾಯಕ ವ್ಯವಸ್ಥಾಪಕ ಸ್ಟೀವನ್ ಉಪಸ್ಥಿತರಿದ್ದರು.