ನವದೆಹಲಿ: ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಿಂದ ಆರ್.ವಿ ದೇವರಾಜ್ ಕುಟುಂಬ ಮಾತ್ರ ಸ್ಪರ್ಧಿಸಬೇಕಾ, ಇನ್ಯಾರೂ ಆ ಕ್ಷೇತ್ರದಿಂದ ಸ್ಪರ್ಧೆ ಮಾಡಬಾರದು ಎನ್ನುವ ನಿಯಮವಿದೆಯಾ ಎಂದು ಉದ್ಯಮಿ, ಕಾಂಗ್ರೆಸ್ ನಾಯಕ ಕೆಜಿಎಫ್ ಬಾಬು ಪ್ರಶ್ನಿಸಿದ್ದಾರೆ.
ಚಿಕ್ಕಪೇಟೆಯಿಂದ ಸ್ಪರ್ಧಿಸುವ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ನಲ್ಲಿದ್ದಿನಿ, ನಮ್ಮ ತಂದೆ, ತಾತಾ ಕೂಡಾ ಕಾಂಗ್ರೆಸ್ ನಲ್ಲಿದ್ದರು. ನಮ್ಮಗೂ ಟಿಕೆಟ್ ಕೇಳುವ ಅಧಿಕಾರ ಇದೆ. ಚಿಕ್ಕಪೇಟೆಯಿಂದ ಯಾಕೆ ಸ್ಪರ್ಧೆ ಮಾಡಬಾರದು, ಆರ್.ವಿ ದೇವರಾಜ್ ಅಥಾವ ಅವರ ಕುಟುಂಬ ಮಾತ್ರ ಸ್ಪರ್ಧೆ ಮಾಡಬೇಕಾ ಎಂದು ಪ್ರಶ್ನಿಸಿದರು.
ಟಿಕೆಟ್ ಯಾರಿಗೆ ನೀಡಬೇಕು ಎಂದು ಪಕ್ಷ ತಿರ್ಮಾನಿಸುತ್ತಿದೆ. ಚಿಕ್ಕಪೇಟೆಯ ಜನರು ನನಗೆ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದಾರೆ. ಅದಕ್ಕಾಗಿ ನಾನು ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ 350 ಕೋಟಿಯ ಯೋಜನೆ ರೂಪಿಸಿದ್ದು, ಪಕ್ಷದ ಅಡಿಯಲ್ಲಿ ಮುಂದುವರಿಸಲು ಅನುಮತಿ ಕೇಳುತ್ತಿದ್ದೇನೆ
ದೆಹಲಿಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿಗೆ ಸಮಯ ಕೇಳಿದ್ದೇನೆ, ಸಮಯ ನೀಡಿದರೇ ಭೇಟಿ ಮಾಡಿ ಚರ್ಚಿಸುವೇ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.