ಪಂಚಮಸಾಲಿ ಮೀಸಲಾತಿ ಕುರಿತು ಸಚಿವ ಸಿಸಿ ಪಾಟೀಲ್ ಸಭೆ

ಹಾವೇರಿ: ಮೀಸಲಾತಿ ಕುರಿತು ಸರ್ಕಾರಕ್ಕೆ ತೆರೆದ ಮನಸ್ಸಿದೆ. ಕಾನೂನು ಬದ್ಧವಾಗಿ , ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಆಗಬೇಕು ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದರು. ಶಿಗ್ಗಾಂವಿ ಹೊರ ಹೊಲಯದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆ ಬಳಿಕ ಮಾಧ್ಯಮಗಳಿಗೆ ಸಚಿವರು ಪ್ರತಿಕ್ರಿಯಿಸಿದರು.

ತರಾತುರಿಯಲ್ಲಿ ಘೋಷಣೆ ಮಾಡಿದ ಎರಡು ರಾಜ್ಯಗಳ ಉದಾಹರಣೆಗಳು ನಮ್ಮ ಮುಂದೆ ಇದೆ. ಮಹಾರಾಷ್ಟ್ರ ಹಾಗೂ ಮದ್ರಾಸ್ ಎರಡೂ ರಾಜ್ಯದಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಈ ವಿಷಯವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ತೆರೆದ ಮನಸ್ಸಿನಿಂದ ಇದ್ದಾರೆ. ಶ್ರೀಗಳು ಸಮಾಜದ ದೃಷ್ಟಿಯಿಂದ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ. ಹಾಗಾಗಿ ಹೋರಾಟ ಕೈ ಬಿಡಿ ಎಂದು ಶ್ರೀಗಳಿಗೆ ಮನವಿ ಮಾಡಿದ್ದೇನೆ ಎಂದು ಸಿಸಿ ಪಾಟೀಲ್ ತಿಳಿಸಿದರು.

ಸಭೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಯತ್ನಾಳ ಸೇರಿದಂತೆ ಪಂಚಮಸಾಲಿ ಮುಖಂಡರ ಬಳಿ ಸಚಿವ ಸಿಸಿ ಪಾಟೀಲ್ ಚರ್ಚಿಸಿದರು.