ನಾಳೆ (ಆ. 24) ಕುಮಟಾದಲ್ಲಿ ಪವರ್ ಕಟ್.!

ಕುಮಟಾ: ಹೆಸ್ಕಾಂ ಉಪ ವಿಭಾಗದ 110/33/11 ಕೆ.ವಿ ಕೆ.ಪಿ.ಟಿ.ಸಿ.ಎಲ್ ಗ್ರಿಡ್‌ನಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗದ ಫೀಡರ್‌ನಲ್ಲಿ ಆ. 24 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುಮಟಾ ಟೌನ್ ಹಾಗೂ ಚಿತ್ರಗಿ ಫೀಡರಿನ ಎಲ್ಲಾ ಭಾಗಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶದ ಬಾಡ, ಮಾಸೂರು, ಧಾರೇಶ್ವರ ಫೀಡರ್‌ಗಳಲ್ಲಿ ಹಾಗೂ 33/11 ಕೆ.ವಿ ಮರಾಕಲ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಸಂತೆಗುಳಿ, ಕಲ್ಲಬ್ಬೆ, ಮುರೂರು ಹಾಗೂ ಹೊದ್ಕೆ-ಶಿರೂರು ಫೀಡರಿನ ಎಲ್ಲಾ ಭಾಗಗಳಲ್ಲಿ ಆ. 24 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.