ವಾ.ಕ.ರ.ಸಾ.ಸಂಸ್ಥೆಯ ಅಪ್ರೆಂಟಿಸ್ ತರಬೇತಿಗೆ ಆ. 29 ರಂದು ಸಂದರ್ಶನ

ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರಕನ್ನಡ ವಿಭಾಗದಲ್ಲಿ ಶಿಶಿಕ್ಷು (ಅಪ್ರೆಂಟಿಸ್) ಅಧಿನಿಯಮ 1961 ಕಾಯ್ದೆಯ ಪ್ರಕಾರ ತಾಂತ್ರಿಕ ವೃತ್ತಿಗಳಲ್ಲಿ ಪೂರ್ಣ ಅವಧಿಗೆ ಅಪ್ರೆಂಟಿಸ್ ತರಬೇತಿ ಪಡೆಯಲು ಆಸಕ್ತ ಅಭ್ಯರ್ಥಿಗಳಿಗೆ ಆ. 29 ರಂದು ಬೆಳಿಗ್ಗೆ 10 ಗಂಟೆಗೆ ಸಂದರ್ಶನಕ್ಕೆ ಕರೆಯಲಾಗಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳೊಂದಿಗೆ ಆಯ್ಕೆ ಪ್ರಾಧಿಕಾರಸ್ಥರಾದ ವಿಭಾಗೀಯ ನಿಯಂತ್ರಣಾಧಿಕಾರಿ, ವಾ.ಕ.ರ.ಸಾ. ಸಂಸ್ಥೆ, ಉತ್ತರಕನ್ನಡ ವಿಭಾಗ ಹಾಗೂ ವಿಭಾಗೀಯ ಕಚೇರಿ ಶಿರಸಿರವರ ಸಮ್ಮುಖದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೇಮಕಾತಿ ಅರ್ಜಿಗಾಗಿ ಶಿರಸಿ ಕಚೇರಿ ದೂರವಾಣಿ ಸಂಖ್ಯೆ 7760991709 ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಉತ್ತರಕನ್ನಡ ವಿಭಾಗದ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.