ಐಪಿಎಲ್‌ನಲ್ಲಿ ಐತಿಹಾಸಿಕ ತ್ರಿಶತಕದತ್ತ ಕಿಂಗ್ ಕೊಹ್ಲಿಯ ಹೆಜ್ಜೆ

ಐಪಿಎಲ್ 2026 ಆವೃತ್ತಿ ಮಾರ್ಚ್ 28ರಿಂದ ಆರಂಭವಾಗಲಿದ್ದು, ಹಾಲಿ ಚಾಂಪಿಯನ್  ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು  ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಐಪಿಎಲ್‌ನಲ್ಲಿ ಕೊಹ್ಲಿಗೆ 300 ಸಿಕ್ಸರ್‌ಗಳ ಮೈಲುಗಲ್ಲು ತಲುಪಲು ಇನ್ನೂ ಕೇವಲ 9 ಸಿಕ್ಸರ್‌ಗಳು ಬೇಕಿದೆ. ಕಿಂಗ್ ಕೊಹ್ಲಿಯ ಸಿಡಿಲಿನ ಹೊಡೆತಗಳನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 🏏

2026 ರ ಐಪಿಎಲ್ ಇದೇ ಮಾರ್ಚ್ 28 ರಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯದ ಇನ್ನೊಂದು ಹೈಲೈಟ್ಸ್ ಅಂದರೆ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಕ್ರಿಕೆಟ್ ಅಂಗಳಕ್ಕೆ ಇಳಿಯಲಿದ್ದಾರೆ.

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ ಈ ಸ್ವರೂಪದಲ್ಲಿ ಐಪಿಎಲ್ ಮಾತ್ರ ಆಡುತ್ತಿದ್ದಾರೆ. ಇನ್ನು ಈ ಬಾರಿಯ ಐಪಿಎಲ್ ವಿರಾಟ್​ ಕೊಹ್ಲಿಗೆ ಮತ್ತಷ್ಟು ವಿಶೇಷವಾಗಿದೆ. ಏಕೆಂದರೆ ಐಪಿಎಲ್​ನಲ್ಲಿ ಸಿಕ್ಸರ್​ಗಳ ತ್ರಿಶತಕ ಪೂರೈಸಲು ವಿರಾಟ್ ಕೊಹ್ಲಿಗೆ ಇನ್ನು ಕೇವಲ 9 ಸಿಕ್ಸರ್‌ಗಳ ಅಗತ್ಯವಿದೆ. ಐಪಿಎಲ್‌ನಲ್ಲಿ 259 ಇನ್ನಿಂಗ್ಸ್‌ಗಳನ್ನಾಡಿರುವ ವಿರಾಟ್ ಇದುವರೆಗೆ 291 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಸಿಕ್ಸರ್​ಗಳ ತ್ರಿಶತಕ ಬಾರಿಸಿದ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿದ್ದರು. ರೋಹಿತ್ ಐಪಿಎಲ್‌ನಲ್ಲಿ ಇದುವರೆಗೆ 302 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಐಪಿಎಲ್​ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 357 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಹೊಂದಿದ ನಂತರ ವಿರಾಟ್ ಕೊಹ್ಲಿ ಪ್ರದರ್ಶನ ಅಮೋಘವಾಗಿದೆ. ವಿರಾಟ್ ಕೊಹ್ಲಿ ಕಳೆದ ಐದು ಇನ್ನಿಂಗ್ಸ್​ಗಳಲ್ಲಿ 2 ಶತಕಗಳನ್ನು ಗಳಿಸಿದ್ದಾರೆ. ಅವರ ಹೆಸರಲ್ಲಿ ಅರ್ಧಶತಕವೂ ಸೇರಿದೆ. ಕಳೆದ ಆವೃತ್ತಿಯಲ್ಲಿ ರನ್​ಗಳ ಮಳೆ ಹರಿಸಿದ್ದ ವಿರಾಟ್, 54 ಸರಾಸರಿಯಲ್ಲಿ 657 ರನ್ ಬಾರಿಸಿದ್ದರು. ಇದರಲ್ಲಿ 8 ಅರ್ಧಶತಕಗಳು ಸೇರಿವೆ. ಈ ಇನ್ನಿಂಗ್ಸ್‌ನಲ್ಲಿ ಅವರು 19 ಸಿಕ್ಸರ್‌ಗಳು ಮತ್ತು 66 ಬೌಂಡರಿಗಳನ್ನು ಬಾರಿಸಿದ್ದಾರೆ.